ಚಿತ್ರದುರ್ಗ: ಬಿರುಗಾಳಿಗೆ ಮನೆ ಮೇಲೆ ನೆಟ್ವರ್ಕ್ ಟವರ್ ಉರುಳಿ ಬಿದ್ದ ಘಟನೆ ನಡೆದಿದೆ.
ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ನಗರದ ಮರ್ಚೆಂಟ್ ಬ್ಯಾಂಕ್ ಮೇಲ್ಬಾಗದಲ್ಲಿದ್ದ ಟವರ್ ಟವರ್ ಬಿದ್ದ ರಭಸಕ್ಕೆ ಮನೆ ಶೀಟ್ ಪುಡಿ ಪುಡಿಯಾಗಿದೆ. ಮಾಯಪ್ಪ ಎಂಬುವವರ ಮನೆ ಮೇಲೆ ಏಕಾಏಕಿ ಟವರ್ ಬಿದ್ದಿದೆ. ಅದೃಷ್ಟವಶಾತ್ ಮಾಯಪ್ಪ ಕುಟುಂಬ ಪ್ರಾಣಪಾಯದಿಂದ ಪಾರಾಗಿದೆ. ಸ್ಥಳಕ್ಕೆ ಪೊಲೀಸರು, ಬ್ಯಾಂಕ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.