ಬೆಂಗಳೂರು: ಈಗಾಗಲೇ ದೇಶದಲ್ಲಿ ನಂದಿನಿ ಹಾಲಿಗೆ ಡಿಮ್ಯಾಂಡ್ ಇದೆ. ಇದರ ಜೊತೆಗೆ ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ 18 ವಿವಿಧ ಮಾದರಿ ನಂದಿನಿ ಕೇಕ್ ಹಾಗೂ ಮಫಿನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಿನ್ನೆ ಜೂನ್ 1 ರಂದು ವಿಶ್ವ ಹಾಲು ದಿನಾಚರಣೆ ಹಿನ್ನೆಲೆ ಹಲವು ಉತ್ಪನ್ನಗಳನ್ನು ಅನಾವರಣ ಮಾಡಲಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಖಾಸಗಿ ಬ್ರಾಂಡ್ನ ಕೇಕ್ ಹಾಗೂ ಮಫಿನ್ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್ಗಳು ಉತ್ತಮ ಗುಣಮಟ್ಟದಲ್ಲಿ ಹಾಗೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಉತ್ಪನ್ನಗಳು, ನಂದಿನಿ ಹಲ್ವಾ, ಅಲ್ಲದೇ ಬ್ರೆಡ್, ಬನ್, ಐಸ್ ಕ್ರೀಂ ಸೇರಿದಂತೆ 150ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಕೆ.ಎಂ.ಎಫ್ ಹಾಗೂ ಹಾಲು ಒಕ್ಕೂಟಗಳಿಂದ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ವೆನಿಲ್ಲಾ, ಚಾಕೊಲೇಟ್, ಪೈನಾಪಲ್, ಸ್ಟ್ರಾಬೆರಿ ಮತ್ತು ಮಾವಾ ಎಂಬ ಐದು ವಿಶಿಷ್ಟ ರುಚಿಗಳ ಕಪ್ ಕೇಕ್ಗಳನ್ನು ಬಿಡುಗಡೆ ಮಾಡಲಾಗಿದೆ.