ಆಪರೇಷನ್ ಸಿಂಧೂರ್ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ಮೋದಿ ಪಾಕಿಸ್ತಾನದ ಗಡಿ ಸನಿಹದ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ರಾಜಸ್ತಾನದ ಬಿಕಾನೇರ್ ಪ್ರವಾಸದಲ್ಲಿರುವ ಪ್ರಧಾನಿ ಇಲ್ಲಿನ ಸುಪ್ರಸಿದ್ಧ ಕರ್ಣಿ ಮಾತೆ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಆಪರೇಷನ್ ಸಿಂಧೂರ ಯಶಸ್ಸು ಹಾಗೂ ಭಾರತೀಯ ಯೋಧರ ಸಾಹಸಕ್ಕೆ ಬೆನ್ನೆಲುಬಾಗಿ ನಿಂತ ದೇಶವಾಸಿಗಳ ಶ್ರೇಯಕ್ಕಾಗಿ ಮೋದಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ, ನಾಲ್ ವಾಯುನೆಲೆಗೂ ಭೇಟಿ ನೀಡಲಿರೋ ಮೋದಿ, ದೇಶ್ ನೋಕ್ ನಲ್ಲಿ 26 ಸಾವಿರ ಕೋಟಿಗಳ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.