ಹುಬ್ಬಳ್ಳಿ: ವಿವಾಹಿತ ಮಹಿಳೆ ಜೊತೆ ಮಾತನಾಡಿದ್ದಕ್ಕೆ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ.
ಇಲ್ಲಿನ ಕಸಬಾಪೇಟೆ ಪೊಲೀಸ್ ಠಾಣೆಯ(police station) ಪಕ್ಕದ ಟಿಪ್ಪು ನಗರದಲ್ಲಿ (Tippu Nagar) ಈ ಘಟನೆ ನಡೆದಿದೆ. ಮುಜಾಫೀರ್ ಎಂಬಾತ ಹಲ್ಲೆಗೊಳಗಾದ ಯುವಕ. ಮಹಿಳೆಯ ಸಂಬಂಧಿಕರು ಸೇರಿದಂತೆ ಸುಮಾರು ಹತ್ತರಿಂದ ಹದಿನೈದು ಜನರ ಗುಂಪೊಂದು ಮುಜಾಫೀರ್ (Muzaffir) ನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಬ್ಲೇಡ್ ನಿಂದ ಸಿಕ್ಕ ಸಿಕ್ಕಲ್ಲಿ ಕೊಯ್ದಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಹಲ್ಲೆ ಮಾಡಿದ ನಂತರ ಆರೋಪಿಗಳು ಮುಜಾಫಿರ್‌ನ ನಿವಾಸಕ್ಕೆ ಬೆತ್ತಲೆ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ಮುಜಾಫೀರ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ(Kim’s Hospital) ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮದ್, ಮಾಬುಲಿ, ಮಲೀಕ್, ಮೈನು ಶಗರಿ, ನದೀಮ್, ಸಮೀರ್ ಸೇರಿದಂತೆ ಹಲವರ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.