ಮಂಡ್ಯ : ಗ್ಯಾಸ್ ಕಟರ್ ಬಳಸಿ ಒಡವೆ ಅಂಗಡಿ ರಾಬರಿ ಮಾಡುತ್ತಿದ್ದ ವೇಳೆ, ಅದನ್ನು ನೋಡಿದ ಹೋಟೆಲ್ ಮಾಲೀಕನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ.

ಈ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ಖದೀಮರು ರಾಬರಿ ಮಾಡುತ್ತಿದ್ದದ್ದನ್ನು ಹೋಟೆಲ್ ಮಾಲೀಕ ನೋಡಿದ್ದಾನೆಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ್ದಾರೆ. ಮಹದೇವಪ್ಪ(55)ಕೊಲೆಯಾಗಿರುವ ವ್ಯಕ್ತಿ.
ಖದೀಮರು ಗ್ಯಾಸ್ ಕಟರ್ ಬಳಸಿ ರಾಬರಿ ಮಾಡುತ್ತಿದ್ದ ವೇಳೆ ಪಕ್ಕದ ಹೋಟೆಲ್ ಮಾಲೀಕ ಹೊರಗೆ ಬಂದಿದ್ದಾರೆ. ಇದನ್ನು ಕಂಡ ಖದೀಮರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.