ಮುಂಬೈ, ಏಪ್ರಿಲ್ 14, 2025: ಆಫ್-ಸೀಸನ್ ಅಲ್ಟಿಮೇಟ್ ಪ್ರಸ್ತುತಪಡಿಸಿದ ರೆಫೆಕ್ಸ್ ಮುಂಬೈ ಅಲ್ಟಿಮೇಟ್ ಲೀಗ್ (MUL) ಸೀಸನ್ 5, ಬಾಂದ್ರಾದ ವಿಂಗ್ಸ್ ಅರೆನಾದಲ್ಲಿ ಭಾನುವಾರ ಆರಂಭವಾಯಿತು. ಲೀಗ್ ನ ಮೊದಲ ದಿನದಂದು ಡ್ಯಾನ್ಸಿಂಗ್ ಡ್ರಾಗನ್ಸ್, ದೇಸಿ ಹಾಕ್ಸ್ ಮತ್ತು ರೀಬಾರ್ನ್ ಫೈರ್ ಈ ಪಂದ್ಯದಲ್ಲಿ ಜಯಗಳಿಸಿದ್ದಾರೆ.
ಮುಂಬೈ ಅಲ್ಟಿಮೇಟ್ ಲೀಗ್ ಸೀಸನ್ 5ರ ಎಲ್ಲಾ ಪಂದ್ಯಗಳನ್ನು ಆಫ್-ಸೀಸನ್ ಅಲ್ಟಿಮೇಟ್ನ ಯೂಟ್ಯೂಬ್ ಚಾನೆಲ್ (@offseasonultimate)ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಫೀಲ್ಡ್ 1 ರಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ಗಳಾದ ಡ್ಯಾನ್ಸಿಂಗ್ ಡ್ರಾಗನ್ಸ್ ತಂಡವು ಬುಂಬೈ ಬುಂಟೈಸ್ ವಿರುದ್ಧ 12-6 ಅಂತರದ ಗೆಲುವು ಸಾಧಿಸಿ ಭರ್ಜರಿ ಆರಂಭ ಶುರುಮಾಡಿತು. ಫೀಲ್ಡ್ 2 ರಲ್ಲಿ ಆಫ್ಟರ್ಬರ್ನರ್ಸ್ ಮತ್ತು ರಿಬೋನ್ ಫೈರ್ ತಂಡಗಳ ನಡುವಿನ ಕಠಿಣ ಹೋರಾಟವು 6-6 ಅಂತರದ ಡ್ರಾ ನಲ್ಲಿ ಅಂತ್ಯವಾಯಿತು.

ಎರಡನೇ ಸುತ್ತಿನ ಪಂದ್ಯದಲ್ಲಿ ದೇಸಿ ಹಾಕ್ಸ್ ತಂಡವು 10 – 8 ಅಂತರದ ಗೆಲುವಿನೊಂದಿಗೆ ಬಾಂಬೆ ರೈನೋಸ್ ವಿರುದ್ಧ ಗೆಲುವು ಸಾಧಿಸಿತು. ಫೀಲ್ಡ್ 2 ರಲ್ಲಿ ಬುಂಬೈ ಬಂಟೈಸ್ ತಂಡವು ರಿಬೋನ್ ಫೈರ್ ವಿರುದ್ಧ 13-3 ಅಂತರದಲ್ಲಿ MUL ಸೀಸನ್ 5ರಲ್ಲಿ ತಮ್ಮ ಮೊದಲ ಜಯವನ್ನು ದಾಖಲಿಸಿತು.
ದೇಸಿ ಹಾಕ್ಸ್ ತಂಡವು ದಿ ಆಫ್ಟರ್ಬರ್ನರ್ಸ್ನ ವಿರುದ್ಧ ಜಯಿಸಿ ಫೀಲ್ಡ್ 1 ನಲ್ಲಿ 11–9 ಜಯ ಸಾಧಿಸಿತು. ಡ್ಯಾನ್ಸಿಂಗ್ ಡ್ರಾಗನ್ಸ್ ತಂಡವು ತಮ್ಮ ವಿಜಯ ಶ್ರೇಣಿಯನ್ನು ಮುಂದುವರೆಸಿ, ಬಾಂಬೆ ರೈನೋಸ್ ವಿರುದ್ಧ 13–5 ಅಂತರದ ಸಂಪೂರ್ಣ ಜಯವನ್ನು ದಾಖಲಿಸಿತು.