ಮೈಸೂರು: ಸತ್ತ ಕೋತಿ ಮರಿಯನ್ನೂ ಮಡಿಲಿನಲ್ಲಿಟ್ಟುಕೊಂಡು ತಾಯಿ ಆರೈಕೆ ಮಾಡಿರುವ ಮನ ಕಲಕುವ ಘಟನೆಯೊಂದು ವೈರಲ್ ಆಗಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮರಿ ಮೃತಪಟ್ಟಿದ್ದಕೂ ಕೋತಿಯೊಂದು ತನ್ನ ಮಡಿಲಿನಲ್ಲಿಟ್ಟುಕೊಂಡು ಅಸಹಾಯಕತೆಯಿಂದ ಓಡಾಡಾದಿದೆ. ಕಳೆದ ಎರಡು ದಿನಗಳಿಂದಲೂ ಮುಖರೋಧನೆಯನ್ನು ಕೋತಿ ಅನುಭವಿಸುತ್ತಿದೆ. ಮೃತದೇಹ ಕೊಳೆತಿದ್ದರೂ ಬಿಡದೆ ತಾಯಿ ಕೋತಿ ಮರಿಯನ್ನು ಇಟ್ಟುಕೊಂಡು ಓಡಾಡುತ್ತಿದೆ. ಕೋತಿಯ ರೋಧನೆ ನೋಡಲು ಆಗದೆ ಸ್ಥಳೀಯ ಯುವಕ ಯಶ್ವಂತ್ ಅಂತ್ಯಕ್ರಿಯೆ ನಡೆಸಿದ್ದಾರೆ.