ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಬಳಿ ಮಂಗವೊಂದು ಮೊಬೈಲ್ ಕಿತ್ತುಕೊಂಡಿರುವ ಘಟನೆ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ನಿನ್ನೆ ಸಂಜೆ ದೇವಸ್ಥಾನಕ್ಕೆ ಬಂದ ವ್ಯಕ್ತಿಯೊಬ್ಬರು ದೇವಸ್ಥಾನದ ಮುಂಭಾಗ ಫೋನ್ ಬಳಸುತ್ತಿದ್ದರು. ಆಗ ವ್ಯಕ್ತಿ ಕೈಯಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಕೋತಿ ದೇವಸ್ಥಾನದ ಮೇಲೆರಿದೆ. ನಂತರ ಮೊಬೈಲ್ ಹಿಂಪಡೆಯಲು ಅಲ್ಲಿನ ಜನರು ಹರಸಾಹಸವನ್ನು ಪಟ್ಟಿದ್ದಾರೆ.