ನವೆಂಬರ್ 8…2016…ಅವತ್ತು ಸಮಸ್ತ ದೇಶವಾಸಿಗಳು ಎಂದಿಗೂ ನಿರೀಕ್ಷಿಸದ ಮಹಾ ಅಚ್ಚರಿಯ ನಿರ್ಧಾರವೊಂದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ದೇಶದಲ್ಲಿ ಅವತ್ತಿನವರೆಗೂ ಜಾರಿಯಲ್ಲಿದ್ದ 1 ಸಾವಿರ ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿತ್ತು. ಭಾರತದಲ್ಲಿ ಆವರೆಗೂ ಚಲಾವಣೆಯಲ್ಲಿದ್ದ ಅತ್ಯಂತ ದೊಡ್ಡ ಮೊತ್ತದ ನೋಟುಗಳನ್ನೇ ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ಕಪ್ಪು ಹಣದ ವಿರುದ್ಧ ಯುದ್ಧ ಸಾರಿತ್ತು. ಇನ್ನೇನು ಈ ಘಟನೆಗೆ ದಶಕ ತುಂಬುವ ಕಾಲ ಸನ್ನಿಹಿತವಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ದೇಶವಾಸಿಗಳಿಗೆ ನೋಟ್ ಬ್ಯಾನ್ ಬಿಸಿ ತಟ್ಟುವ ಮುನ್ಸೂಚನೆ ಸಿಗುತ್ತಿದೆ.
ಕಪ್ಪು ಹಣದ ವಿರುದ್ಧ ಎರಡನೇ ಇನ್ನಿಂಗ್ಸ್ ಗೆ ಕ್ಷಣಗಣನೆ
ಈ ಹಿಂದೆ 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿತ್ತು. ಇಗೀಗ ಭ್ರಷ್ಟಾಚಾರ ತಡೆ ಮತ್ತು ಕಪ್ಪು ಹಣ ಸಂಗ್ರಹವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮತ್ತೊಂದು ದೊಡ್ಡ ಹೆಜ್ಜೆಯಿಡುವ ತಯಾರಿ ಆರಂಭಿಸಿದೆ ಎನ್ನಲಾಗುತ್ತಿದೆ. ಇದರ ಅಂಗವಾಗಿಯೇ ಸದ್ಯ ಚಾಲ್ತಿಯಲ್ಲಿರುವ ಅತಿ ದೊಡ್ಡ ಮೊತ್ತದ ಕರೆನ್ಸಿಯಾಗಿರುವ 500 ಮುಖಬೆಲೆಯ ನೋಟನ್ನೇ ರದ್ದುಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ಎನ್ ಡಿಎ ಸರ್ಕಾರದ ಕಿಂಗ್ ಮೇಕರ್, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಸುಳಿವು ನೀಡಿದ್ದು ಶೀಘ್ರವೇ 500ರ ನೋಟು ಅಮಾನ್ಯವಾಗಬಹುದು ಎಂದಿದ್ದಾರೆ.
ಎಟಿಎಂಗಳಲ್ಲಿ 100-200ರ ನೋಟಿನ ಸಂಖೈ ಹೆಚ್ಚಿಸಿ
500ರ ಮುಖಬೆಲೆಯ ನೋಟುಗಳ ಅಮಾನ್ಯಕ್ಕೆ ಇಂಬು ಎನ್ನುವಂತೆ ಕೆಲ ಬೆಳವಣಿಗೆಗಳು ನಡೆದಿವೆ. ಮೊನ್ನೆ ಆರ್ ಬಿಐ ಹೊಸ ಮಾರ್ಗಸೂಚಿ ಘೋಷಿಸಿದ್ದು, ಎಲ್ಲ ಬ್ಯಾಂಕ್ ಗಳು ತಮ್ಮ ಎಟಿಎಂಗಳಲ್ಲಿ 200 ಹಾಗೂ 100ರ ಮುಖಬೆಲೆಯ ನೋಟುಗಳನ್ನು ಹೆಚ್ಚುವಂತೆ ಸೂಚಿಸಿದೆ. ಅಷ್ಟೇ ಅಲ್ಲಾ ಚಿಲ್ಲರೆ ವ್ಯಾಪಾರದಿಂದ ಹಿಡಿದು, ಸಗಟು ವ್ಯಾಪಾರದವರೆಗೂ ದೇಶದೆಲ್ಲೆಡೆ ಡಿಜಿಟಲ್ ಪಾವತಿಯನ್ನು ಅನುಷ್ಠಾನಕ್ಕೆ ತರುವಂತೆಯೂ ಆದೇಶಿಸಲಾಗಿದೆ. ಹಾಗೆ ನೋಡಿದರೆ ದೇಶದಲ್ಲೀಗ 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ಸಂಪೂರ್ಣ ಸ್ತಬ್ಧವಾಗಿದೆ. ಇದೀಗ 500ರ ನೋಟಿಗೂ ಬ್ರೇಕ್ ಬೀಳುವ ಕಾಲ ಬರುತ್ತಿದೆ.
100 ಹಾಗೂ 200ರ ಮುಖಬೆಲೆಯ ನೋಟುಗಳನ್ನು ಭ್ರಷ್ಟರು ಸಂಗ್ರಹಿಸಿಡುವುದು ದೊಡ್ಡ ತಲೆನೋವಾಗಲಿದೆ. ಅಪಾರ ಪ್ರಮಾಣದ ನೋಟುಗಳನ್ನು ಸುಲಭವಾಗಿ ಮುಚ್ಚಿಡುವುದು ಅಸಾಧ್ಯ ಎನ್ನುವುದು ಕೇಂದ್ರ ವಿತ್ತ ಇಲಾಖೆ ಅಭಿಮತ. ಹೀಗಾಗಿಯೇ ದೊಡ್ಡ ಮುಖಬೆಲೆಯ ನೋಟುಗಳಾದರೆ ಸಾಗಾಟ ಮತ್ತು ಸಂಗ್ರಹ ಸುಲಭ. ಈ ನಿಟ್ಟಿನಲ್ಲೇ 500ರ ನೋಟುಗಳನ್ನು ನಿಲ್ಲಿಸಿಬಿಟ್ಟರೆ ಕಪ್ಪುಹಣ ಹೊಂದಿದವರು ಕಂಗಾಲಾಗುವುದು ನಿಶ್ಚಿತ. ಹಾಗಂತಾ ಈ ನಿರ್ಧಾರ ಸೆಪ್ಟಂಬರ್ ಹೊತ್ತಿಗೆ ಅಧಿಕೃತವಾಗಿ ಹೊರಬೀಳುವ ಸಾಧ್ಯತೆಗಳಿವೆ.