ಬೆಂಗಳೂರು: ಬಿಜೆಪಿಯ ಮತಗಳ್ಳತನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ವೇಳೆ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.
ಕಳೆದ ಬಾರಿ ಚುನಾವಣೆಯನ್ನು ಮೋದಿ ಅಂಡ್ ಕಂಪನಿ ನ್ಯಾಯವಾಗಿ ಗೆದ್ದಿಲ್ಲ. ಈ ಅಕ್ರಮವನ್ನ ನಾವು ಹೊರಗೆ ತರುವ ಕೆಲಸ ಮಾಡುತ್ತೇವೆ. ದೇಶವನ್ನು ನಾಶ ಮಾಡುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ನಮ್ಮ ಎಲ್ಲಾ ಸಂಸದರು ಸೇರಿ ಚುನಾವಣೆ ಆಯೋಗಕ್ಕೆ ದೂರು ಕೊಡುತ್ತೇವೆ. ಈ ಸರ್ಕಾರ ಜನರ ಆದೇಶದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತೇವೆ. ಈ ಸರ್ಕಾರ ಬಹುಕಾಲ ಉಳಿಯುವುದಿಲ್ಲ. ನಾವು ಮಾಡು ಇಲ್ಲವೇ ಮಡಿ ಚಳುವಳಿ ಮಾಡಬೇಕು ಕಿಡಿ ಕಾರಿದ್ದಾರೆ.
ಹೋದ ಚುನಾವಣೆ ಜನಕ್ಕೆ ದ್ರೋಹ ಮಾಡಿದಂತಹ ಚುನಾವಣೆಯಾಗಿದೆ. ಮಹದೇವಪುರದಲ್ಲಿ ಆಗಿರುವಂತಹ ಮತದಾನ ಕಳ್ಳತನವನ್ನು ವಿವರವಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶದಲ್ಲಿ ಚುನಾವಣೆ ಉಳಿಸಬೇಕು, ಓಟ್ ಉಳಿಸಬೇಕು. ಪ್ರಜಾಪ್ರಭುತ್ವ ಉಳಿಸಬೇಕು ಎಂಬುವುದು ಇದೆ. ಆದರೆ ಮೋದಿ ಅವರು ಎಲ್ಲಿ ಓಟ್ ಹೆಚ್ಚಳ ಮಾಡಬೇಕು. ಕೇಂದ್ರದಲ್ಲಿ ಈಗೀರುವ ಸರ್ಕಾರ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರ. ಈ ಸರ್ಕಾರಕ್ಕೆ ಯಾವುದೇ ರೀತಿ ನೈತಿಕತೆ ಇಲ್ಲ. ದೇಶದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಇದು ಅಪ್ಪಟ ಸುಳ್ಳು. ಎಲ್ಲಿಯೂ ಕೂಡಾ ಅವರು ನೇರವಾಗಿ ಚುನಾವಣೆ ಗೆದ್ದಿಲ್ಲ. ಕಳ್ಳತನದಿಂದ ಸರ್ಕಾರ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಮೋದಿ ದೇಶದ ಆರ್ಥಿಕ ವ್ಯವಸ್ಥೆ ಕೆಡಿಸುತ್ತಿದ್ದಾರೆ. ಅವರನ್ನ ಕೆಳಗಿಳಿಸುವುದು ಅಷ್ಟಲ್ಲದೇ ಬುದ್ದಿ ಕಲಿಸುತ್ತೇವೆ ಎಂದಿದ್ದಾರೆ.