ಅರ್ಧ ಶತಮಾನದ ಬಳಿಕ ನಾಳೆ ಭಾರತದಲ್ಲಿ ಮಾಕ್ ಡ್ರಿಲ್ ನಡೆಯಲಿದೆ. ಯುದ್ಧಕ್ಕೆ ಮುಂಚಿತವಾಗಿ ಪ್ರಜೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಬಚಾವ್ ಆಗುವುದು ಹೇಗೆ ಎನ್ನುವದರ ಡ್ರಿಲ್ ನಾಳೆ ನಡೆಯಲಿದೆ.

ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ನ 244 ಜಿಲ್ಲೆಗಳಲ್ಲಿ ಈ ತರಬೇತಿ ನಡೆಯಲಿದೆ. ಈ ವೇಳೆ ಸೈರನ್ ಮೊಳಗಿಸುವ ಮೂಲಕ ಎಚ್ಚರಿಸುವಿಕೆಯಿಂದ ಹಿಡಿದು, ಶತ್ರುಗಳ ವೈಮಾನಿಕ ದಾಳಿಯಿಂದ ಪಾರಾಗಲು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತ ಹಾಗೂ ವಾಹನಗಳ ಸಂಚಾರ ನಿರ್ಬಂಧಿಸುವೆಯ ಪ್ರಾತ್ಯಕ್ಷಿತೆ ನೀಡಲಾಗುತ್ತದೆ.

ನಾಳಿನ ಈ ಅಣಕು ತರಬೇತಿಯಲ್ಲಿ ಸಿವಿಲ್ ಡಿಫೆನ್ಸ್ ನ ಯೋಧರು, ಹೋಂ ಗಾರ್ಡ್ಸ್, ಎನ್ ಸಿಸಿ, ಎನ್ಎಸ್ಎಸ್, ಎನ್ ವೈಕೆಎಸ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಪ್ರಾತ್ಯಕ್ಷಿತೆ ನೀಡಲಿದ್ದಾರೆ. ಇವರೊಟ್ಟಿಗೆ, ಸೇನೆಯ ಯೋಧರು, ಅಗ್ನಿಶಾಮಕ ಸಿಬ್ಬಂದಿಯೂ ಸಾಥ್ ನೀಡಲಿದ್ದಾರೆ. ಈಗಾಗಲೇ ಕೇಂದ್ರ ಗೃಹ ಸಚಿವಾಲಯದಿಂದ ಆಯಾ ಸಂಬಂಧಪಟ್ಟ ಜಿಲ್ಲಾಡಳಿತಗಳಿಗೆ ಆದೇಶ ರವಾನಿಸಲಾಗಿದ್ದು, ನಾಳಿನ ತರಬೇತಿಗೆ ಇಂದಿನಿಂದಲೇ ಹಲವೆಡೆ ಪೂರ್ಯ ತಯಾರಿ ಆರಂಭಿಸಲಾಗಿದೆ.