ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರು ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದರು. ಚಿರು ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಕ್ಯೂಟ್ ಜೋಡಿಗೆ ಸ್ಯಾಂಡಲ್ವುಡ್ ತಾರೆಯರು ಹಾಗೂ ಕರ್ನಾಟಕದ ಜನತೆ ಸಾಕ್ಷಿಯಾಗಿದ್ದರು.
ಈ ಜೋಡಿಗೆ ಅದ್ಯಾವ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲಾ, ನಟ ಚಿರು ಹೃದಯಾಘಾತದಿಂದ ಸಾವನ್ನಪ್ಪಿದರು. ಅದಾದ ಬಳಿಕ ಮೇಘನಾ ಮರು ಮದುವೆಯಾಗ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತಿದೆ. ಈ ಪ್ರಶ್ನೆಗೆ ಇದೀಗ ನಟಿ ಮೇಘನಾ ರಾಜ್ ಫುಲ್ಸ್ಟಾಪ್ ಇಟ್ಟಿದ್ದಾರೆ. ಹೌದು, ಚಿರು ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಮೇಘನಾ ರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೆ ‘ಪ್ರತಿ ಜೀವಿತಾವಧಿಗೂ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಅಂದರೆ ಜೀವನಪೂರ್ತಿ ಚಿರು ನನ್ನ ಜೊತೆಯಲ್ಲಿ ಇರುತ್ತಾನೆ ಎಂಬರ್ಥ, ಈ ರೀತಿ ಕ್ಯಾಪ್ಷನ್ ಹಾಕುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ನಟಿ ಮೇಘನಾರಾಜ್ ಒಬ್ಬ ಮಗನಿದ್ದು ಆತನ ಹೆಸರು ರಾಯನ್ ಸರ್ಜಾ, ರಾಯನ್ ಚಿರುನ ಹೋಲಿಕೆಯನ್ನೇ ಹೊಂದಿದ್ದು ಪುಟ್ಟ ಕಂದಮ್ಮನೊಂದಿಗೆ ಮೇಘನಾ ಖುಷಿಯಾಗಿ ಇದ್ದಾರೆ.