ಅಮೆರಿಕದಲ್ಲಿ ಮಂಡ್ಯ ಮೂಲದ ಟೆಕ್ಕಿಯೊಬ್ಬರು ಪತ್ನಿ, ಪುತ್ರನ ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೂಲತ ಮಂಡ್ಯ ಜಿಲ್ಲೆ ಕಿಕ್ಕೇರಿಯವರಾದ ಹರ್ಷವರ್ಧನ್ ತಮ್ಮ ಪತ್ನಿ ಶ್ವೇತಾ ಹಾಗೂ 14 ವರ್ಷದ ಮಗನನ್ನು ಗುಂಡಿಕ್ಕಿ ಕೊಂದು ತಾವೂ ಪ್ರಾಣಬಿಟ್ಟಿದ್ದಾರೆ. ವಾಷಿಂಗ್ಟನ್ ನ ನ್ಯೂಕಾಸ್ಟಲ್ ನಲ್ಲಿ ನೆಲೆಸಿದ್ದ ಹರ್ಷವರ್ಧನ್ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದರು. ಆದರೆ, ನ್ನೆ ಏಪ್ರಿಲ್ 24ರಂದು ತಮ್ಮ ಪೆಂಟ್ ಹೌಸ್ ನಲ್ಲೇ ಪತ್ನಿ, ಪುತ್ರನನ್ನು ಗುಂಡಿಕ್ಕಿ ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಹರ್ಷವರ್ಧನ್ ರ ಹಿರಿಯ ಪುತ್ರ ಮನೆಯಲ್ಲಿ ಇಲ್ಲದ ಕಾರಣ ಕಾರಣ ಈ ಆತ್ಮಹತ್ಯೆ ದುರಂತದಿಂದ ಪಾರಾಗಿದ್ದಾರೆ. ಹರ್ಷವರ್ಧನ್ ರ ತಾಯಿ ಮೈಸೂರಿನಲ್ಲಿ ನೆಲೆಸಿದ್ದು ಮಗನ ಸಾವಿನ ಸುದ್ದಿ ತಿಳಿದ ಬಳಿಕ ಅಮೆರಿಕಗೆ ಪಯಣಿಸಿದ್ದಾರೆ. ಇನ್ನು ಮತ್ತೋರ್ವ ಸಹೋದರ ಕೂಡಾ ಅಮೆರಿಕದಲ್ಲೇ ಇದ್ದಾರೆ. ಈ ಮೊದಲು ಮೈಸೂರಿನಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರ್ಷವರ್ಧನ್ ಕೊವಿಡ್ ಬಳಿಕ ಆ ಸಂಸ್ಥೆ ಲಾಕ್ ಔಟ್ ಆಗಿದ್ದಕ್ಕೆ ಅಮೆರಿಕಗೆ ತೆರಳಿದ್ದರು. 2022ರಿಂದ ಹರ್ಷವರ್ಧನ್ ಭಾರತಕ್ಕೆ ಭೇಟಿ ನೀಡಿರಲಿಲ್ಲ. ಆದರೆ, ಟೆಕ್ಕಿ ಆತ್ಮಹತ್ಯೆ ಹಿಂದಿನ ಸತ್ಯವಿನ್ನೂ ನಿಗೂಢವಾಗಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂಬ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.