ಹಾವೇರಿ: ಜಿಲ್ಲೆಯಲ್ಲಿ ಕೂಡ ಹಾರ್ಟ್ ಅಟ್ಯಾಕ್ ಸರಣಿ ಮುಂದುವರೆದಿದ್ದು, ಇಂದು ಕೂಡ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
47 ವರ್ಷದ ವ್ಯಕ್ತಿ ಇಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸುಭಾಸ ಅಮರಗೋಳ (47) ಹೃದಯಾಘಾತಕ್ಕೆ ಬಲಿಯಾಗಿರುವ ದುರ್ದೈವಿ. ಸುಭಾಸ ಹಾವೇರಿ ನಗರ ನಿವಾಸಿ ಎನ್ನಲಾಗಿದೆ. ಸುಭಾಸ್ ಗ್ಯಾಸ್ ಸಿಲಿಂಡರ್ ವಿತರಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಯಾವುದೇ ಕಾಯಿಲೆಗಳಿರಲಿಲ್ಲ ಎನ್ನಲಾಗಿದೆ. ಆದರೆ, ತಡರಾತ್ರಿ ಮಲಗಿದ ಸಂದರ್ಭದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ.