ಮಂಡ್ಯ: ವಾಟರ್ ಬಾಟಲ್ ಗೆ ಜಿಎಸ್ ಟಿ ಬಿಲ್ ಹಾಕಿದ್ದನ್ನು ಪ್ರಶ್ನೆ ಮಾಡಿದಕ್ಕೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆಯ ಸಾಗರ್ ಕೆಫೆ ಹೋಟೆಲ್ ನಲ್ಲಿ ನಡೆದಿದೆ.
ಕೀರ್ತಿ ರಾಜ್ ಎಂಬಾತ ಹೋಟೆಲ್ ಗೆ ನೀರನ್ನು ಪೂರೈಕೆ ಮಾಡುತ್ತಿದ್ದ. ನೀರಿನ ಬಾಟಲ್ ಗೆ ಜಿಎಸ್ ಟಿ ಬಿಲ್ ಯಾಕೆ ಹಾಕಿದ್ದೀರಿ ಎಂದು ಹೋಟೆಲ್ ಸಿಬ್ಬಂದಿಗಳಾದ ಮಿಥುನ್ ಹಾಗೂ ರಾಜ್ ಎಂಬುವವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಕೀರ್ತಿ ಗಲಾಟೆ ಮಾಡಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೋಟೆಲ್ ಕಂಪ್ಯೂಟರ್ ಧ್ವಂಸ ಮಾಡಿದ್ದಾನೆ. ಈ ದೃಶ್ಯ ಹೋಟೆಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.