ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ನ್ನು ಗುಟ್ಟಾಗಿ ಸೂಟ್ ಕೇಸ್ ನಲ್ಲಿ ತುಂಬಿಸಿಕೊಂಡು ಬಾಯ್ಸ್ ಹಾಸ್ಟೆಲ್ ಗೆ ಕರೆತರುವಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಹರಿಯಾಣದ ಓಪಿ ಜಿಂದಾಲ್ ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ. ಸೂಟ್ ಕೇಸ್ ನಿಂದ ಯುವತಿಯೊಬ್ಬಳು ಆಚೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರಿಯಾಣದ ಸೋನಿಪತ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ತನ್ನ ಗರ್ಲ್ ಫ್ರೆಂಡ್ ನ್ನು ಸೂಟ್ ಕೇಸ್ ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಬಂದಿದ್ದಾನೆ.
ಈ ವೇಳೆ ಅನುಮಾನಗೊಂಡ ಸೆಕ್ಯುರಿಟಿ ಗಾರ್ಡ್ ಸೂಟ್ ಕೇಸ್ ಓಪನ್ ಮಾಡಲು ಹೇಳಿದ್ದಾರೆ. ಈ ವೇಳೆ ಸೂಟ್ ಕೇಸ್ ನಿಂದ ಯುವತಿಯೊಬ್ಬಳು ಹೊರ ಬಂದಿದ್ದಾಳೆ. ಆದರೆ, ಈ ಘಟನೆ ಬಗ್ಗೆ ವಿಶ್ವವಿದ್ಯಾಲಯದಿಂದ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.