ಲಾಕ್ ಡೌನ್ ಟೈಮ್ ನಲ್ಲಿ ಬಿಡುಗಡೆಯಾಗಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ನಟನೆಯ ಲವ್ ಮಾಕ್ಟೇಲ್ ಸಿನಿಮಾ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಅದಾದ ಬಳಿಕ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಅದು ಅಷ್ಟೊಂದು ಯಶಸ್ಸು ಕಾಣಲಿಲ್ಲ. ಆದರೂ ಅದು ಅಭಿಮಾನಿಗಳ ಮನದಲ್ಲಿ ನೆಲೆಯೂರಿದೆ.
ಆ ಸಿನಿಮಾದಲ್ಲಿ ಡಾರ್ಲಿಕ್ ಕೃಷ್ಣ ಅವರಿಗೆ ಹುಡುಗಿ ತೋರಿಸುವ ಅಂದ್ರೆ ಮ್ಯಾಚ್ ಬ್ರೋಕರ್ ಜಂಕಿ ಪಾತ್ರದಲ್ಲಿ ಮಿಂಚಿದ್ದ ನಟಿ ಸುಶ್ಮಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಆಗಾಗ ಚಂದದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇದೀಗ ಸುಶ್ಮಿತಾ ಗೌಡ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಸೀಮಂತ ಶಾಸ್ತ್ರ ಬಹಳ ಸಿಂಪಲ್ ಆಗಿ ನೆರೆವೇರಿದೆ..2022ರಲ್ಲಿ ಅಶ್ವಿನ್ ಮತ್ತು ಸುಶ್ಮಿತಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇಬ್ಬರು ವಿದೇಶದಲ್ಲಿ ಕೆಲವು ವರ್ಷ ನೆಲೆಸಿದ್ದಾರೆ. ಆಗಾಗ ದಂಪತಿ ಬೆಂಗಳೂರು ಮತ್ತು ಫಾರಿನ್ ಅಂತ ಓಡಾಡುತ್ತಿರುತ್ತಾರೆ. ಲವ್ ಮಾಕ್ಟೇಲ್ 2 ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಸೀಮಂತ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋಗೆ ಅಭಿಮಾನಿಗಳು ತರೇಹವಾರು ಕಾಮೆಂಟ್ ಮಾಡಿದ್ದಾರೆ.