ಉಡುಪಿ: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆ ಬಗ್ಗೆ ಸಂಶೋಧನೆ ಆಗಬೇಕು. ಲೈಫ್ ಸ್ಟೈಲ್ ಕಾರಣವೋ? ಫುಡ್ ಸ್ಟೈಲ್ ಕಾರಣವೋ? ಮಾನಸಿಕ ಒತ್ತಡ ಕಾರಣವೋ? ಎಂಬ ಕುರಿತು ವೈಜ್ಞಾನಿಕ ಸಂಶೋಧನೆ ಆಗಬೇಕು. ಬಾಣಂತಿ, ಹಸುಗೂಸು ಸಾವಾದಾಗ ಆರೋಗ್ಯ ಮಂತ್ರಿ ತಲೆಕೆಡಿಸಿಕೊಳ್ಳಲಿಲ್ಲ. ಈಗಲಾದರೂ ರಾಜಕಾರಣ ಬದಿಗಿಟ್ಟು, ತಜ್ಞರ ತಂಡ ರಚಿಸಿ ಸಂಶೋಧನೆ ಮಾಡಿ ವರದಿ ಕೊಡಲಿ ಎಂದು ಆಗ್ರಹಿಸಿದ್ದಾರೆ.