ಬೆಂಗಳೂರು: ಡ್ಯಾನ್ಸ್ ಇವೆಂಟ್ ನಲ್ಲಿ ತಡರಾತ್ರಿ ದೊಡ್ಡ ಹೈಡ್ರಾಮಾ ನಡೆದಿರುವ ಘಟನೆ ನಡೆದಿದೆ.
ಟೌನ್ ಹಾಲ್ ಮುಂದೆ ಈ ಹೈಡ್ರಾಮಾ ನಡೆದಿದೆ. ಇವೆಂಟ್ ಆರ್ಗನೈಸರ್ ಹಾಗೂ ಪೋಷಕರ ಮಧ್ಯೆ ಈ ಗಲಾಟೆ ನಡೆದಿದೆ. ಸಾವಿರಾರು ರೂಪಾಯಿ ಹಣ ಪಡೆದು ಡ್ಯಾನ್ಸ್ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ಯಾನ್ಸ್ ಪ್ರೋಗ್ರಾಮ್ ನಲ್ಲಿ ಭಾಗವಹಿಸಿದ್ದ ಪ್ರತಿ ತಂಡದಿಂದ ತಲಾ 50 ರಿಂದ 60 ಸಾವಿರ ರೂ. ಹಣ ಪಡೆದು ಅವಕಾಶ ನೀಡಿಲ್ಲ. ಅಲ್ಲದೇ, ಖ್ಯಾತ ಚಲನಚಿತ್ರ ಜಯಪ್ರದ ಕಡೆಯಿಂದ ಪ್ರಶಸ್ತಿ ಕೊಡಿಸುವುದಾಗಿ ಹೇಳಿದ್ದರು. ಆದರೆ ಕೊಡಿಸಿಲ್ಲ ಎಂದು ಕಾರ್ಯಕ್ರಮ ಆಯೋಜಕರ ವಿರುದ್ಧ ಆರೋಪ ಕೇಳಿ ಬಂದಿದೆ.
ಹೀನಾ ಜೈನ್ ಎನ್ನುವವರು ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ನಟಿ ಜಯಪ್ರದ ಆಗಮಿಸಿದ್ದರು. ಆದರೆ, ಸಮಯದ ಅಭಾವದ ಹಿನ್ನೆಲೆಯಲ್ಲಿ ನೃತ್ಯ ಪ್ರದರ್ಶನಕ್ಕೆ ಡ್ಯಾನ್ಸ್ ಗ್ರೂಪ್ ಗಳಿಗೆ ಯಾವುದೇ ಅವಕಾಶ ನೀಡಿರಲಿಲ್ಲ. ಆದರೆ, ಗ್ರೂಪ್ ಡ್ಯಾನ್ಸ್ ಗಳು ನಡೆಯುತ್ತವೆ ಎಂದು ಪೋಷಕರು ಬೆಳಗ್ಗೆ 6 ಗಂಟೆಗೆ ಬಂದು ರಾತ್ರಿ 12ರ ವರೆಗೆ ಕಾದು ಕುಳಿತಿದ್ದರು ಎನ್ನಲಾಗಿದೆ. ಆದರೆ, ಈಗ ಡ್ಯಾನ್ಸ್ ಗೂ ಅವಕಾಶ ನೀಡಿಲ್ಲ. ಬದಲಾಗಿ ಹಣ ವಾಪಾಸ್ ಕೊಡುತ್ತಿಲ್ಲ ಎಂದು ಪೋಷಕರು ಟೌನ್ ಹಾಲ್ ಮುಂದೆ ಆಯೋಜಕಿ ಹೀನಾ ಜೈನ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನಂತರ ಪೊಲೀಸ್ ಠಾಣೆಯಲ್ಲಿ ಸಮಸ್ಯೆ ಇತ್ಯರ್ಥ ಮಾಡಲಾಗಿದೆ ಎನ್ನಲಾಗಿದೆ.