ಕೊಪ್ಪಳ: ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಣೇಶ ಶೋಭಾಯಾತ್ರೆಯಲ್ಲಿ ಭಾಗಿಯಾಗಲು ಕೊಪ್ಪಳ ಜಿಲ್ಲೆ ಗಂಗಾವತಿಗೆ ಭೇಟಿ ನೀಡಲಿದ್ದಾರೆ.
ಆದರೆ ಯತ್ನಾಳ್ ಆಗಮನಕ್ಕೆ ಸಮಾಜಿಕ ಜಾಲತಾಣದಲ್ಲಿ ಯತ್ನಾಳ್ ಗೋ ಬ್ಯಾಕ್ ಅಭಿಯಾನ ಶುರುವಾಗಿದೆ.

ದ್ವೇಷ ಭಾಷಣ,ಹಿಂಸಾಚಾರ, ಕೋಮು ಗಲಭೆ, ಶಾಂತಿ ಕದಡೋ ಕುಖ್ಯಾತಿಗೆ ಹೆಸರಾಗಿರುವ ಯತ್ನಾಳ್ ಗಂಗಾವತಿಗೆ ಬರುತ್ತಿದ್ದಾರೆ. ಕೂಡಲೇ ಯತ್ನಾಳ್ ಜಿಲ್ಲಾ ಪ್ರವೇಶ ನಿರ್ಬಂಧ ಮಾಡಬೇಕು. ಗಂಗಾವತಿಯಲ್ಲಿ ಅಹಿತಕರ ಘಟನೆ ನಡೆದರೆ ಯಾರು ಹೊಣೆ. ಜನಾರ್ದನ ರೆಡ್ಡಿ ಅವರೇ ನಿಮ್ಮಿಂದ ಜನ ಸೇರಿಸಲಾಗದಷ್ಟು ದುರ್ಬಲ ನೀವಾಗಿಲ್ಲ ಎಂದು ಭಾವಿಸುವೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
 
                                 
			 
			
 
                                 
                                


















