ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ನೌಕರರಿಗೆ ಆರೋಗ್ಯ ಸುರಕ್ಷತೆ ಒದಗಿಸಲು ರೂಪಿಸಲಾಗಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು (Karnataka Arogya Sanjeevini Scheme) ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದು ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ಉಚಿತ ಚಿಕಿತ್ಸೆ ಒದಗಿಸುವ ಮಹತ್ವದ ಯೋಜನೆಯಾಗಾಗಿದೆ. ಹಾಗಾಗಿ, ಇದು ಸರ್ಕಾರಿ ನೌಕರರಿಗೆ ಸಿಹಿ ಸುದದಿಯಾಗಿದೆ.
ಇದಕ್ಕೂ ಮೊದಲು ಜಾರಿಯಲ್ಲಿದ್ದ ಜ್ಯೋತಿ ಸಂಜೀವಿನಿ ಯೋಜನೆಯನ್ನು ಸ್ಥಗಿತಗೊಳಿಸಿ, ಈ ಹೊಸ ಯೋಜನೆಯು ಹೆಚ್ಚಿನ ಸೌಲಭ್ಯಗಳೊಂದಿಗೆ ಬರುತ್ತಿದೆ. ಯೋಜನೆಯಿಂದ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ-ಮಂಡಳಿಗಳ 3 ಲಕ್ಷ ಸಿಬ್ಬಂದಿ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಪ್ರಯೋಜನ ಪಡೆಯಲಿದ್ದಾರೆ.
ಆರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ 1200 ಪ್ರಕಾರದ ಕಾಯಿಲೆಗಳಿಗೆ ನಗದು ರಹಿತ ಉಚಿತ ಚಿಕಿತ್ಸೆ ಸಿಗುತ್ತದೆ. ನೌಕರರು ಸಾರ್ವಜನಿಕ ಆಸ್ಪತ್ರೆಗಳು (ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು) ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಈಗಾಗಲೇ 500 ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಆರು ತಿಂಗಳೊಳಗೆ 1000 ಆಸ್ಪತ್ರೆಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಪೂರ್ಣಗೊಳ್ಳುವವರೆಗೆ, ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನು 6 ತಿಂಗಳವರೆಗೆ ವಿಸ್ತರಿಸಲಾಗಿದೆ.
ಯೋಜನೆ ಅನ್ವಯ ಆಯಾ ಗ್ರೂಪ್ ನ ಸರ್ಕಾರಿ ನೌಕರರಿಗೆ ಮಾಸಿಕ ವಂತಿಗೆ ಕಡಿತಗೊಳ್ಳುತ್ತದೆ. ನೌಕರರ ಸಂಬಳದಿಂದಲೇ ಹಣ ಕಡಿತವಾಗುತ್ತದೆ. ಗ್ರೂಪ್ ಎ ನೌಕರರಿಗೆ 1 ಸಾವಿರ ರೂ., ಗ್ರೂಪ್ ಬಿ ನೌಕರರಿಗೆ 500 ರೂಪಾಯಿ, ಗ್ರೂಪ್ ಸಿ ನೌಕರರಿಗೆ 350 ರೂಪಾಯಿ ಹಾಗೂ ಗ್ರೂಪ್ ಡಿ ನೌಕರರಿಗೆ 250 ರೂಪಾಯಿ ಮಾಸಿಕ ವಂತಿಗೆ ನಿಗದಿಪಡಿಸಲಾಗಿದೆ.
ದ್ದ