ಬೆಂಗಳೂರು: ಕನ್ನಡದ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ (Kamal Haasan) ಈಗ ಸರಿಯಾದ ಪೆಟ್ಟು ತಿನ್ನುತ್ತಿದ್ದಾರೆ. ಕನ್ನಡಿಗರ ಶಾಪ ಅವರನ್ನು ತಟ್ಟಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಕಮಲ್ ಹಾಸನ್ ನಟಿಸಿದ್ದ ‘ಥಗ್ ಲೈಫ್’ ಚಿತ್ರಮಂದಿಗಳಲ್ಲಿ ಮಕಾಡೆ ಮಲಗಿದೆ. ಕರ್ನಾಟಕದಲ್ಲಂತೂ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿಲ್ಲ. ಹೀಗಾಗಿ ಸಿನಿಮಾ ಭಾರೀ ಸೋಲು ಕಂಡಿದೆ. ಈ ಮಧ್ಯೆಯೇ ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನ ಕಳೆದರೂ 40 ಕೋಟಿ ರೂ. ಕ್ಲಬ್ ಸೇರಲು ಒದ್ದಾಡುತ್ತಿದೆ.
‘ಥಗ್ ಲೈಫ್’ ಚಿತ್ರಕ್ಕೆ ಕರ್ನಾಟಕದಲ್ಲಿ ಕಲೆಕ್ಷನ್ ಇಲ್ಲದ ಹಿನ್ನೆಲೆಯಲ್ಲಿ ಚಿತ್ರ ಸೋಲು ಕಾಣುತ್ತಿದೆ. ಈ ಚಿತ್ರವು ಮೊದಲ ದಿನ 15 ಕೋಟಿ ರೂ., ಎರಡನೇ ದಿನ 7.15 ಕೋಟಿ ರೂ., ಮೂರನೇ ದಿನ 7.75 ಕೋಟಿ ರೂ. ಗಳಿಸಿದೆ. ಭಾನುವಾರ ಕೇವಲ 6.50 ಕೋಟಿ ರೂ. ಗಳಿಸಿದೆ. ಇಲ್ಲಿಯವರೆಗೆ ಈ ಚಿತ್ರ ಒಟ್ಟು 36.90 ಕೋಟಿ ರೂ. ಗಳಿಸಿದೆ. ಹೀಗಾಗಿ ಚಿತ್ರ ತಂಡ ಭಾರೀ ನಿರಾಸೆ ಅನುಭವಿಸುತ್ತಿದೆ.