ಮಂಡ್ಯ : ಟೌನ್ ಶಿಫ್ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸಲು K.A.I.D.B ಮುಂದಾಗಿದೆ ಎಂಬ ಆರೋಪ ಈಗ ಕೇಳಿ ಬಂದಿದೆ.
ಟೌನ್ ಶಿಪ್ ಗೆಂದು ನೂರಾರು ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿ ಹೆಸರಿಗೆ ಮಂಜೂರು ಮಾಡಲಾಗಿದೆ ಎಂದು K.A.I.D.B ಅಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣದ ಭಾಗದ ರೈತರು ಸಿಡಿದೆದ್ದಿದ್ದಾರೆ.
K.A.I.D.B ಕಚೇರಿ ಮುಂದೆ ರೈತರ ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ಹೊರಹಾಕಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೀಚನಕುಪ್ಪೆ ಗ್ರಾಮದ ಸರ್ವೇ ನಂ76 ರ ಸರ್ಕಾರಿ ಬಿ ಖರಾಬು ಜಮೀನು ಭೂ ಟೌನ್ ಶಿಫ್ ಹೆಸರಲ್ಲಿ ಭೂ ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ಬರ್ಗರೀನ್ ಪ್ರಾಪರ್ಟಿ ಹೆಸರಲ್ಲಿ ಟೌನ್ ಶಿಫ್ ಮಾಡುವುದಾಗಿ ರೈತರ ಜಮೀನನ್ನು ಖಾಸಗಿ ಮಾಲೀಕ ಖರೀದಿಸಿದ್ದಾರೆನ್ನಲಾಗಿದೆ. ಖಾಸಗಿ ವ್ಯಕ್ತಿಗೆ ಸಾಥ್ ನೀಡಿರುವ KIADB ಅಧಿಕಾರಿಗಳ ನಡೆಗೆ ರೈತರ ಆಕ್ರೋಶ ಹೊರಹಾಕಿದ್ದು, ರೈತರ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಲು ರೈತರು ಆಗ್ರಹಿಸಿದ್ದಾರೆ.