ಬೆಂಗಳೂರು: ರೂಮ್ ಬಾಡಿಗೆ ಪಡೆದು ಕೋಟಾ ನೋಟ್ ಪ್ರಿಂಟ್ ಮಾಡುತ್ತಿರುವ ಆರೋಪವೊಂದು ಕೇಳಿ ಬಂದಿದೆ.
ಶಿವಾಜಿ ನಗರದಲ್ಲಿ ಹೈ ಫೈ ರೂಮ್ ಬುಕ್ ಮಾಡಿಕೊಂಡು ಕೋಟಾ ನೋಟ್ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈಗ ಹೋಟೆಲ್ ವೊಂದರಲ್ಲಿ ನೋಟಿನ ಬಂಡಲ್ ಹಾಗೂ ಬಿಳಿ ಹಾಳೆಗಳ ಬಂಡಲ್ ಪತ್ತೆಯಾಗಿದೆ. ಹೋಟೆಲ್ ನಲ್ಲಿ ಆನ್ ಲೈನ್ ಮೂಲಕ ಕ್ರಿಷ್ ಮಾಲಿ ಎಂಬಾತ ರೂಮ್ ಬುಕ್ ಮಾಡಿಕೊಂಡಿದ್ದ. ಕಮರ್ಷಿಯಲ್ ಸ್ಟ್ರೀಟ್ ನ ಮೈನ್ ಗಾರ್ಡ್ ಕ್ರಾಸ್ ರೋಡ್ ನಲ್ಲಿರುವ ಹೊಟೇಲ್ ನಲ್ಲಿ ತಂಗಿದ್ದ.
ಮೂರು ದಿನಗಳ ನಂತರ ರೂಮ್ ಖಾಲಿ ಮಾಡಿದ್ದ. ಖಾಲಿ ಮಾಡಿದ ವೇಳೆ 500 ರೂ. ಮುಖ ಬೆಲೆಯ ಆರು ನೋಟುಗಳನ್ನು ನೀಡಿದ್ದ. ಆಗ ನೋಟುಗಳನ್ನು ಪರಿಶೀಲಿಸಿದಾಗ ಅದು ಖೋಟಾ ಎಂಬುವುದು ಪತ್ತೆಯಾಗಿರುವುದು ಗೊತ್ತಾಗಿತ್ತು. ಆಗ ಹೋಟೆಲ್ ಮ್ಯಾನೇಜರ್ ದೂರು ನೀಡಿದ್ದರು. ರೂಮ್ ಪರಿಶೀಲಿಸಿದಾಗ ಝರಾಕ್ಸ್ ಮಾಡಿರುವ ಪೇಪರ್ ಪತ್ತೆಯಾಗಿದ್ದವು.
ಎರಡು ದಿನಗಳ ಕಾಲ ರೂಮ್ ನಲ್ಲಿ ತಂಗಿದ್ದ. ಘಟನೆ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.