ಅನುಮತಿ ಇಲ್ಲದೆ ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿದ್ದಕ್ಕೆ ರೀಲ್ಸ್ ಸ್ಟಾರ್ ಗಳಿಗೆ ಈಗ ಸಂಕಷ್ಟ ಶುರುವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ರೀಲ್ಸ್ ಸ್ಟಾರ್ ಗಳನ್ನು ಸೈಬರ್ ಪೋಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಸೋನು ಶ್ರೀನಿವಾಸ್ ಗೌಡಗೂ ಸಂಕಷ್ಟ ಶುರುವಾಗಿದೆ.
ಹಿಂದೆ ಸೋನು ಗೌಡ ರೀಲ್ಸ್ ಮಾಡಲು ಬಡ ಹುಡುಗಿಯನ್ನು ಬಳಸಿಕೊಂಡು ದುಡ್ಡು ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಅವರು ಜೈಲಿಗೂ ಕೂಡ ಹೋಗಿ ಬಂದಿದ್ದರು. ಈಗ ಬೆಟ್ಟಿಂಗ್ ಆಪ್ ಪ್ರಮೋಟ್ ಮಾಡಿದ ವಿಚಾರವಾಗಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಕೀಲರೊಬ್ಬರು ಈ ಕುರಿತು ದೂರು ನೀಡಿದ್ದರು. ರೀಲ್ಸ್ ಸ್ಟಾರ್ ಗಳ ಪೇಜ್ ಗಳಲ್ಲಿ ಬಿತ್ತರಿಸಲಾಗುತ್ತಿರುವ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಹಲವರಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಸೋನು ಶ್ರೀನಿವಾಸ ಗೌಡ, ವರುಣ್ ಆರಾಧ್ಯ, ಗೋಲ್ಡ್ ದಚ್ಚು ದೀಪಕ್ ಗೌಡ ಸೇರಿದಂತೆ ಹಲವರಿಗೆ ಈಗ ಸಂಕಷ್ಟ ಶುರುವಾಗಿದೆ.