ಬೆಂಗಳೂರು : 2025ರ ಜನವರಿಯಂದು ಒಳಮೀಸಲಾತಿಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಿತ್ತು. ಮಾ.27ರಂದು ಆಯೋಗ ಮಧ್ಯಂತರ ವರದಿಯನ್ನೂ ಸಲ್ಲಿಸಿದ್ದು, ಮಧ್ಯಂತರ ವರದಿಯಲ್ಲಿ ನಿಖರ ದತ್ತಾಂಶ ಇಲ್ಲ ಎಂಬ ಆರೋಪ ಕೇಳಿ ಬಂದಾಗ, ಮರು ಸಮೀಕ್ಷೆಗೆ ಶಿಫಾರಸ್ಸು ಮಾಡಲಾಗಿತ್ತು. ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲು ಸಂಪುಟ ಒಪ್ಪಿಗೆ ನೀಡಿತ್ತು. ಮೇ 5 ರಿಂದ ಜುಲೈ 6 ರವರೆಗೆ ನಡೆದ ಸಮೀಕ್ಷೆ ನಡೆದಿದ್ದು, ಇಂದು (ಸೋಮವಾರ) ವಿಧಾನಸಭೆಯಲ್ಲಿ ಆಯೋಗದ ಅಧ್ಯಕ್ಷ ನಾಗಮೋಹನ್ ದಾಸ್ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ.
ವರದಿ ಸಲ್ಲಿಕೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಾಗಮೋಹನ್ ದಾಸ್, ಆಯೋಗದ ಅಧ್ಯಕ್ಷತೆಯನ್ನು ನನಗೆ ಸರ್ಕಾರ ವಹಿಸಿದೆ. ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿದ್ದೇವೆ. ಇದೇ ಮಾರ್ಚ್ 27ರಂದು ಹೊಸದಾಗಿ ಸಮೀಕ್ಷೆ ಅವಶ್ಯಕತೆ ಇದೆ ಎಂದು ಮಧ್ಯಂತರ ವರದಿ ಕೊಟ್ಟಿದ್ದೇವು. ಬಳಿಕ ಸರ್ಕಾರದ ಆದೇಶದದಂತೆ 60 ದಿನ ಸಮೀಕ್ಷೆ ಮೊಬೈಲ್ ಆ್ಯಫ್ ಬಳಸಿ ಸಮೀಕ್ಷೆ ಮಾಡಿದ್ದೇವು. ಇಂದು ವರದಿ ದತ್ತಾಂಶ ಸೇರಿ 1766 ಪುಟಗಳ ವರದಿ ಸಲ್ಲಿಸಿದ್ದೇನೆ. ವರದಿ ಸರ್ಕಾರದ ಆಸ್ತಿ. ಒಪ್ಪುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.
ಇನ್ನು, ಸಮೀಕ್ಷೆಗಾಗಿ ಯಾವುದೇ ಸಂಭಾವನೆ ಅಥವಾ ಗೌರವಧನವನ್ನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ಪಡೆದಿಲ್ಲ ಎಂದು ಹೇಳಲಾಗಿದೆ.
“ವರದಿಯಲ್ಲಿರುವ ಪ್ರಮುಖಾಂಶಗಳು :”
-ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು.
-1,07,01,982 ಜನರು ಸಮೀಕ್ಷೆಯಲ್ಲಿ ಭಾಗಿ.
-ವರದಿ, ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಒಟ್ಟು ಸೇರಿ ಸುಮಾರು 1766 ಪುಟಗಳು.
-ಆರು ಶಿಫಾರಸ್ಸುಗಳನ್ನೊಳಗೊಂಡಿರುವ ವರದಿ.