ಬೆಂಗಳೂರು: ಇಂದು ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ಸರ್ಕಾರಕ್ಕೆ ಒಳಮೀಸಲಾತಿ ವರದಿ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಏನಿದೆ ಎಂದು ಇನ್ನೂ ನೋಡಿಲ್ಲ. ಆ.7 ರಂದು ಸಂಪುಟ ಸಭೆ ಇದೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಗಮೋಹನ್ ದಾಸ್ ಅವರರ ನೇತೃತ್ವದ ಆಯೋಗದಿಂದ ಒಳಮೀಸಲಾತಿ ವರದಿಯನ್ನು ಸ್ವೀಕರಿಸಿದ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಪುಟ ಸಭೆಯಲ್ಲಿ ವರದಿಯನ್ನು ಚರ್ಚೆ ಮಾಡಿದ ಬಳಿಕ ವರದಿಯಲ್ಲಿ ಏನಿದೆ ಎಂದು ತಿಳಿಸುತ್ತೇವೆ. ಬಿಜೆಪಿಯ ಟೀಕೆಗೆ ಅರ್ಥವಿಲ್ಲ ಎಂದಿದ್ದಾರೆ.