ಉತ್ತರ ಪ್ರದೇಶ ಸರ್ಕಾರ ನೋಯ್ಡಾದಲ್ಲಿ ವಿನೂತನ ಸಾರಿಗೆ ಸೇವೆ ಆರಂಭಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಯೋಗಿ ಸರ್ಕಾರ ನೋಯ್ಡಾ ನಿವಾಸಿಗಳ ಅನುಕೂಲಕ್ಕೆ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸುತ್ತಿದೆ.
ರಾಜಧಾನಿ ದೆಹಲಿಗೆ ಅಪ್ಪಿಕೊಂಡಂತಿರುವ ನೋಯ್ಡಾದಲ್ಲಿ ಇಂದಿನಿಂದ ಪ್ರಯೋಗಿಕವಾಗಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಕಾರ್ಯಾರಂಭ ಮಾಡಿದೆ. ಐಟಿ ಉದ್ಯೋಗಿಗಳು, ಯುವಕರನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ಅನುಭವ ನೀಡುವ ಡಬಲ್ ಡೆಕ್ಕರ್ ಬಸ್ಸನ್ನು ಪರಿಚಯಿಸಿದೆ.
ನೋಯ್ಡಾದ ಪ್ಯಾರಿ ಚೌಕ್ ನಿಂದ ಮೊರಾನಾವರೆಗೂ ಸದ್ಯಕ್ಕೆ ಪ್ರಯೋಗಿಕ ಬಸ್ ಸಂಚರಿಸಲಿದೆ. ಜನರ ಸ್ಪಂದನೆಗೆ ಅನುಗುಣವಾಗಿ ಬಸ್ ಸಂಖ್ಯೆಯನ್ನು ಹೆಚ್ಚಸಲು ಯುಪಿ ಸರ್ಕಾರ ನಿರ್ಧರಿಸಿದೆ. ನೋಯ್ಡಾದ ಅತ್ಯಂತ ಜನಸಂದಣಿ ಮಾರ್ಗವಾಗಿರುವ ಪ್ಯಾರಿ ಚೌಕ್ ಮತ್ತು ಮೊರಾನಾ ನಡುವೆ ನೂತನ ಬಸ್ ಸೇವೆ ಕಾರ್ಯಾರಂಭಿಸಿದ್ದು, ಪ್ರಯಾಣಿಕರು ಖುಷಿಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 22ಕ್ಕೂ ಹೆಚ್ಚು ಬಸ್ ಗಳನ್ನು ರಸ್ತೆಗಿಳಿಸಲು ಯುಪಿ ರಾಜ್ಯ ರಸ್ತೆ ಸಾರಿಗೆ ನಿಗಮ ತೀರ್ಮಾನಿಸಿದೆ.