ರಿಯಲ್ ಎಸ್ಟೇಟ್ ದುನಿಯಾದಲ್ಲೀಗ ಭಾರತ ಉತ್ತುಂಗದಲ್ಲಿದೆ. ಪ್ರಾಪರ್ಟಿ ಖರೀದಿ, ಮಾರಾಟ ವಿಚಾರದಲ್ಲಿ ಈಗಾಗಲೇ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆದರೆ, ವಿಚಾರ ಏನಪ್ಪಾ ಅಂದ್ರೆ ದೇಶದ ಅತ್ಯಂತ ಐಷಾರಾಮಿ ಮತ್ತು ಅಷ್ಟೇ ದುಬಾರಿ ಬೆಲೆಯ ಅಪಾರ್ಟ್ ಮೆಂಟ್ ವೊಂದು ಸಿದ್ಧವಾಗಿದೆ. ಅದರ ಬೆಲೆ ಕೇಳಿದರೆ ಎಂಥವರಿಗೂ ನಿದ್ರೆ ಬರಲಿಕ್ಕಿಲ್ಲ ಎನ್ನಿಸುತ್ತೆ. ಯಾಕೆಂದ್ರೆ ಇದು ಶ್ರೀಸಾಮಾನ್ಯ ಕನಸಿನಲ್ಲೂ ಊಹಿಸದಂಥಾ ದೊಡ್ಡ ಬೆಲೆಯ ಫ್ಲ್ಯಾಟ್ ಗಳು ಈ ಅಪಾರ್ಟ್ ಮೆಂಟ್ ನಲ್ಲಿವೆ.
ದೆಹಲಿಯಲ್ಲಿ ತಲೆ ಎತ್ತಿದ ಡಿಎಲ್ ಫ್ ದಾಹ್ಲಿಯಾಸ್
ಗುರಗ್ರಾಮದ ಸೆಕ್ಟರ್ 54ರ ಗಾಲ್ಫ್ ಕೋರ್ಸ್ ರಸ್ತೆಯಲ್ಲಿದೆ. ಭಾರತದ ಅತ್ಯಂತ ಐಷಾರಾಮಿ ಅಮಾರ್ಟ್ ಮೆಂಟ್. ದೇಶದ ಖ್ಯಾತ ಬಿಲ್ಡರ್ ಡಿಎಲ್ ಎಫ್ ನಿರ್ಮಿಸಿರೋ ಈ ಅಪಾರ್ಟ್ ಮೆಂಟ್ ನ ಪ್ಲ್ಯಾಟ್ ಗಳೀಗ ಬಿಸಿ ದೋಸೆಯಂತೆ ಖರ್ಚಾಗುತ್ತಿವೆ. ಬೆಲೆ ನಿಜಕ್ಕೂ ದೆಹಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲೇ ಅತ್ಯಂತ ದುಬಾರಿಯಾಗಿದ್ರೂ ದೇಶ-ವಿದೇಶದ ಗಣ್ಯರು ಇಲ್ಲಿ ಮನೆ ಖರೀದಿಗೆ ಮುಗಿಬಿದ್ದಿದ್ದಾರೆ.
17 ಎಕರೆ, 420 ವೈಭವೋಪೇತ ಮನೆಗಳು
ನಂಬುವುದಕ್ಕೆ ಅಸಾಧ್ಯವಾದರೂ ಇದು ಸತ್ಯ. ದೆಹಲಿ ಸಮೀಪದ ಗುರಗ್ರಾಮದ ಐಷಾರಾಮಿ ಪ್ರದೇಶದ 17 ಎಕರೆಯಲ್ಲಿ ವ್ಯಾಪಿಸಿದೆ. ಡಿಎಲ್ ಎಫ್ ದಾಹ್ಲಿಯಾಸ್. ಬರೋಬ್ಬರಿ 8 ಟವರ್ ಗಳ, 29 ಅಂತಸ್ತಿನ ಈ ಅಪಾರ್ಟ್ ಮೆಂಟ್ ನಲ್ಲಿ 420 ಐಷಾರಾಮಿ ಮನೆಗಳಿದ್ದು, ಈ ಪೈಕಿ 15 ಅತ್ಯಾಕರ್ಷಕ ಪೆಂಟ್ ಹೌಸ್ ಗಳಿವೆ. ವಿಶೇಷ ಅಂದ್ರೆ 170 ಪ್ಲ್ಯಾಟ್ ಗಳು ಈಗಾಗಲೇ ಬಿಕರಿಯಾಗಿವೆ. ಈ ಮೂಲಕವೇ ಡಿಎಲ್ ಎಫ್ ಈಗಾಗಲೇ 11,180 ಕೋಟಿ ಸಂಪಾದಿಸಿದೆ ಎನ್ನಲಾಗ್ತಿದೆ.
ಇನ್ನು ಇಲ್ಲಿನ ಮನೆಗಳ ಬೆಲೆ 65 ಕೋಟಿಯಿಂದ ಆರಂಭವಾಗಿ ಪೆಂಟ್ ಹೌಸ್ ಗಳು 150 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಜಗತ್ತಿನ ಪ್ರತಿಷ್ಠಿತ ಕಂಪನಿಗಳ ಸಿಇಒಗಳು, ಸಿನಿ ತಾರೆಯರು, ಉದ್ಯಮಿಗಳು, ಕ್ರಿಕೆಟರ್ಸ್ ಗಳು ಇಲ್ಲಿ ಮನೆ ಖರೀದಿಗೆ ತುದಿಗಾಲಲ್ಲಿ ನಿಂತಿದ್ದಾರೆ.
ಶಿಖರ್ ಧವನ್ ಖರೀದಸಿದ್ರು ಅದ್ಧೂರಿ ನಿವಾಸ
ಈ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ಮಾಜಿ ಕ್ರಿಕೆಟಿಗ ಗಬ್ಬರ್ ಖ್ಯಾತಿಯ ಶಿಖರ್ ಧವನ್ 69 ಕೋಟಿ ನೀಡಿ ಮನೆ ಖರೀದಿಸಿದ್ದಾರೆ. 6040 ಸ್ಕ್ವಯರ್ ಫೀಟ್ ನ ಈ ಮನೆಯನ್ನ ಅವರು ಪ್ರತಿ ಸ್ಕ್ವಯರ್ ಫೀಟ್ ಗೆ 1.08 ಲಕ್ಷದಂತೆ ಪಾವತಿಸಿ ಖರೀದಿ ಮಾಡಿದ್ದಾರೆ. ಇನ್ನು ಈ ಖರೀದಿಯ ಸ್ಟ್ಯಾಂಪ್ ಡ್ಯೂಟಿಯೇ ಬರೋಬ್ಬರಿ 3.24 ಕೋಟಿಯಷ್ಟಾಗಿ ಎನ್ನಲಾಗ್ತಿದೆ.
ಇನ್ನು ಈ ಪ್ಲ್ಯಾಟ್ ನ ವಿಶೇಷವೆಂದ್ರೆ ಅತ್ಯಂತ ಉತ್ಕೃಷ್ಟ ಸಾಮಗ್ರಿ ಬಳಕೆ, ಪ್ರತಿಷ್ಠಿತ ಪ್ರದೇಶ, ಲೇಕ್ ವ್ಯೂ, ಪ್ರತಿ ಮನೆಗೆ ಖಾಸಗಿ ಸಿನಿಮಾ ಹಾಲ್, ಸ್ವಿಮ್ಮಿಂಗ್ ಪೂಲ್, ಲಾಂಡ್ರಿ ಏರಿಯಾಗಳಿವೆ. ಇನ್ನು ಇದೇ ಅಪಾರ್ಟ್ ಮೆಂಟ್ ನಲ್ಲಿ ಖ್ಯಾತ ಕಂಪನಿ ಸಿಇಒ ಒಬ್ರು 150 ಕೋಟಿ ನೀಡಿ ಅತ್ಯಾಕರ್ಷಕ ಡ್ಯೂಪ್ಲೆಕ್ಸ್ ಪೆಂಟ್ ಹೌಸ್ ಖರೀದಿ ಮಾಡಿದ್ದಾರೆ.