ಪಾಕಿಸ್ತಾನಕ್ಕೆ ಭಾರತ ಮತ್ತೊಂದು ದೊಡ್ಡ ಆಘಾತ ನೀಡಿದೆ. ಪಾಕಿಸ್ತಾನದ ಸೆಂಟ್ರಲ್ ಪಂಜಾಬ್ ಪ್ರಾಂತ್ಯದ ಸರ್ಗೋಧಾ ಏರ್ ಬೇಸ್ ನ್ನೇ ಇದೀಗ ಧ್ವಂಸಗೊಳಿಸಲಾಗಿದೆ.
ಇಸ್ಲಾಮಾಬಾದ್ ನ ನೂರ್ ಖಾನ್ ವಾಯುನೆಲೆಯನ್ನು ಛಿದ್ರಗೊಳಿಸಿದ್ದ ಭಾರತ ಇದೀಗ ಪಾಕಿಸ್ತಾನದ ಪ್ರಮುಖ ಸೇನಾ ನೆಲೆ ಸರ್ಗೋಧಾವನ್ನು ಸರ್ವನಾಶ ಮಾಡಿದೆ.
ಪಾಕಿಸ್ತಾನ ಪ್ರಮುಖ ವಾಯುನೆಲೆಗಳಲ್ಲಿ ಒಂದಾದ ಸರ್ಗೋಧಾ ಅತ್ಯಂತ ಸುರಕ್ಷಿತ ಸೇನಾ ತಾಣ ಅಂತಲೇ ಕರೆಸಿಕೊಳ್ತಿತ್ತು. ಆದ್ರೀಗ ಭಾರತ ಆ ಸರ್ಗೋಧಾ ನೆಲೆಯನ್ನು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದೆ. ಒಂದು ಮೂಲದ ಪ್ರಕಾರ ಇದೇ ಸರ್ಗೋಧಾದಲ್ಲೇ ಪಾಕಿಸ್ತಾನದ ಅಣ್ವಸ್ತ್ರ ಅಡಗಿದೆ ಎನ್ನಲಾಗುತ್ತಿದೆ.
ಹೀಗಾಗಿ ಭಾರತದ ಈ ದಾಳಿಯ ಹಿಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ. ಹಾಗೆ ನೋಡಿದರೆ, ಇದೀಗ ಪಾಕಿಸ್ತಾನಕ್ಕೆ ಅಂತಿಮವಾಗಿ ಉಳಿದಿರೋದು ಕೇವಲ ಚಾಕೋಬಾದ್ ಏರ್ ಬೇಸ್ ಮಾತ್ರ. ಸರ್ಗೋಧಾಗೂ ಚಾಕೋಬಾದ್ ಗೂ 700 ಕಿಲೋಮೀಟರ್ ಅಂತರವಿದೆ. ಈ ವಾಯುನೆಲೆಗಳಲ್ಲೇ ಪಾಕ್ ನ ಎಫ್ 16 ಯುದ್ಧ ವಿಮಾನಗಳಿದ್ದು, ಅಣ್ವಸ್ತ್ರದ ಕಾವಲಿನ ಹೊಣೆಯನ್ನು ಇದೇ ಎಫ್ 16ಗಳು ಹೊತ್ತಿವೆ.