ಕೊಲೆಸ್ಟ್ರಾಲ್ ಎನ್ನುವುದು ಬಹುತೇಕ ಜನರಿಗೆ ಕಾಡುವ ಸಮಸ್ಯೆ. ದಿನನಿತ್ಯದ ಆಹಾರ ಪದ್ಧತಿಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಲು ಕಾರಣವಾಗುತ್ತದೆ. ದೈನಂದಿನ ಆಹಾರ ಪದ್ಧತಿ ಹಾಗೂ ಪ್ರತಿದಿನ ನಾವು ಅನುಸರಿಸುತ್ತಿರುವ ಜೀವನಶೈಲಿ ಸರಿಯಾಗಿದ್ದರೆ, ನಾವು ಕೂಡ ಆರೋಗ್ಯದಿಂದ ಇರುತ್ತೇವೆ. ಇಲ್ಲಿ ಪ್ರಮುಖವಾಗಿ ನೆನಪಿಡಬೇಕಾದ ಅಂಶ ಏನೆಂದರೆ ಜಿಡ್ಡುಭರಿತ ಆಹಾರ ಪದಾರ್ಥಗಳಿಂದ ನಾವು ದೂರ ಇರಬೇಕು ಎಂಬುವುದು ವೈದ್ಯರ ಸಲಹೆ.
ಚಾಟ್ಸ್ ಗೆ ಹೇಳಿ ಗುಡ್ ಬೈ!
ಬಹುತೇಕ ಮಂದಿ ಸಂಜೆಯಾದರೆ ಸಾಕು ಚಾಟ್ಸ್ ತಿನ್ನುವ ಹಂಬಲದಲ್ಲಿ ಇರುತ್ತಾರೆ. ಕುರುಕುರು ತಿಂಡಿಗಳನ್ನು ತಿನ್ನುವುದು ಅಂದರೆ, ಎಲ್ಲರಿಗೂ ಬಹಳ ಇಷ್ಟ. ಹೀಗಾಗಿ ಇಂತಹ ಚಾಟ್ಸ್ ಗಳನ್ನು ತಿನ್ನುವ ಹವ್ಯಾಸದಿಂದ ದೂರವಿದ್ದರೆ ಒಳ್ಳೆಯದು. ಬಾಯಿಗೆ ಹಿತ ಅಂತ ಅನಿಸಿದರೂ ಕೂಡ ದೇಹಕ್ಕೆ ಚಾಟ್ಸ್ ಗಳು ಬಹಳ ಕೆಟ್ಟದ್ದು, ಹೀಗಾಗಿ ಚಾಟ್ಸ್ ತಿನ್ನುವುದನ್ನು ಕಡಿಮೆ ಮಾಡಿದರೆ ಉತ್ತಮ. ತಂಪು ಪಾನೀಯ, ಸಂಸ್ಕರಿಸಿದ ಆಹಾರಪದಾರ್ಥಗಳು, ಎಣ್ಣೆಯಲ್ಲಿ ಕರಿದಿರುವ ಆಹಾರ ಪದಾರ್ಥಗಳಿಂದ ದೂರವಿದ್ದರೆ, ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಫೈಬರ್ ಯುಕ್ತ ಆಹಾರ ಸೇವಿಸಿ!
ನಾವು ಪ್ರತೀ ದಿನ ಮಾಡುವ ಡಯಟ್ ಪ್ಲಾನ್ ನಲ್ಲಿ ಫೈಬರ್ ಯುಕ್ತ ಆಹಾರವನ್ನು ಸೇವಿಸುವ ಅಗತ್ಯ ಇದೆ. ಸೇಬು, ಪೇರಳೆ ಹಣ್ಣು, ಬೀನ್ಸ್ ಹೀಗೆ ವಿವಿಧ ಬಗೆಯ ನಾರಿನ ಅಂಶವಿರುವ ಆಹಾರ ಸೇವಿಸಿದರೆ ಕೊಲೆಸ್ಟ್ರಾಲ್ ಬರುವುದನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಇನ್ನು ಸೇವಿಸುವ ಬೆಳಗಿನ ಉಪಾಹಾರ ಜೊತೆ ಓಟ್ಸ್ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಲ್ಲಿರುವ ಕರಗುವ ಫೈಬರ್ ಗುಣ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದಂತೆ
ಲೆಮನ್ ಜ್ಯೂಸ್ ಸೇವನೆ!
ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿನ ಕೊಲೆಸ್ಟ್ರಾಲ್ ಅನ್ನು ಮುಕ್ತಗೊಳಿಸಬಹುದು. ನೀರು ಕುಡಿಯುವುದರ ಬದಲು ನಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಹೊಟ್ಟೆಯ ಕೊಬ್ಬು ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ಲಿಂಬೆಹಣ್ಣಿನ ಶರಬತ್ತಿಗೆ ಕೊಂಚ ಉಪ್ಪು ಹಾಕಿ ಕುಡಿದರೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಬಹುತೇಕ ಜನ ಧಡೂತಿ ವ್ಯಕ್ತಿಗಳು ಈ ರೀತಿಯ ಹವ್ಯಾಸಗಳನ್ನು ಮಾಡಿ, ತಮ್ಮ ದೇಹದ ತೂಕವನ್ನು ಕಡಿಮೆಗೊಳಿಸಿಕೊಳ್ಳುತ್ತಾರೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ನಾವು ಇಲ್ಲಿ ನಿಮಗೆ ಹೇಳಿರುವುದು ಸತ್ಯವೇ ಅಂತಾ ಇಲ್ಲ. ನೀವು ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆದುಕೊಂಡೇ ನಿರ್ಧಾರ ಮಾಡಿ. ಆಹಾರ ಪದ್ಧತಿ ಅನುಸರಿಸಿ.