ಬೆಂಗಳೂರು: ಪೋಸ್ಟ್ ಆಫೀಸ್ ನ ಸಣ್ಣ ಉಳಿತಾಯ ಯೋಜನೆಗಳು ಇತ್ತೀಚೆಗೆ ಭಾರಿ ಜನಪ್ರಿಯತೆ ಪಡೆಯುತ್ತಿವೆ. ಷೇರ ಮಾರುಕಟ್ಟೆ, ಮ್ಯೂಚುವಲ್ ಫಂಡ್ ಗಳ ರೀತಿ ಯಾವುದೇ ರಿಸ್ಕ್ ಇಲ್ಲದೆ, ನಿಶ್ಚಿತ ಆದಾಯ ಲಭಿಸುವ ಕಾರಣ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳಲ್ಲಿ ಹೆಚ್ಚಿನ ಜನ ಹೂಡಿಕೆ ಮಾಡುತ್ತಿದ್ದಾರೆ. ಅಂಚೆ ಕಚೇರಿಯ ಇಂತಹ ಪ್ರಮುಖ ಯೋಜನೆಗಳಲ್ಲಿ ರೆಕರಿಂಗ್ ಡೆಪಾಸಿಟ್ ಅಥವಾ ಆರ್ ಡಿ ಯೋಜನೆಯೂ ಒಂದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ ಶೇ.6.7ರಷ್ಟು ಬಡ್ಡಿಯ ಲಾಭ ಸಿಗುತ್ತದೆ.
ಹೌದು ಪೋಸ್ಟ್ ಆಫೀಸ್ ನ ಆರ್ ಡಿ ಯೋಜನೆಯಲ್ಲಿ ನೀವು ತಿಂಗಳಿಗೆ ಕೇವಲ 4 ಸಾವಿರ ರೂ. ಹೂಡಿಕೆ ಮಾಡುತ್ತ ಹೋದರೆ, 5 ವರ್ಷಗಳಲ್ಲಿಯೇ ನೀವು 45 ಸಾವಿರ ರೂ. ಬಡ್ಡಿ ಆದಾಯ ಪಡೆಯಬಹುದಾಗಿದೆ. ತಿಂಗಳಿಗೆ 4 ಸಾವಿರ ರೂ.ನಂತೆ ಹೂಡಿಕೆ ಮಾಡಿದರೆ, 5 ವರ್ಷಗಳಲ್ಲಿ ಒಟ್ಟು 2,40,000 ರೂ. ಹೂಡಿಕೆ ಮಾಡಿದಂತೆ ಆಗುತ್ತದೆ. ಹಾಗಾಗಿ 5 ವರ್ಷಗಳಲ್ಲಿ ರೂ.45,463 ಬಡ್ಡಿ ಸಿಗುತ್ತದೆ. ಇದರಿಂದ ನಿಮಗೆ ಒಟ್ಟು 2,85,463 ರೂ. ರಿಟರ್ನ್ಸ್ ಸಿಗಲಿದೆ.
ಪೋಸ್ಟ್ ಆಫೀಸ್ ನ ಆರ್ ಡಿ ಯೋಜನೆಯ ನಿಯಮಗಳ ಪ್ರಕಾರ, ಯಾವುದೇ ಒಬ್ಬ ಹೂಡಿಕೆದಾರನು ಗರಿಷ್ಠ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಮೂರು ವರ್ಷಗಳ ನಂತರ ಹಣವನ್ನು ಹಿಂಪಡೆಯಬಹುದಾದರೂ ಹೆಚ್ಚಿನ ಬಡ್ಡಿಯ ಲಾಭ ಗಳಿಸಲು ಆಗುವುದಿಲ್ಲ. ಹಾಗಾಗಿ, ಹೂಡಿಕೆ ಮಾಡುವವರು ಗರಿಷ್ಠ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಒಳ್ಳೆಯ ಲಾಭ ಸಿಗಲಿದೆ.
ಪೋಸ್ಟ್ ಆಫೀಸ್ ಆರ್ ಡಿ ಯೋಜನೆಗೆ ಕೇಂದ್ರ ಸರ್ಕಾರದ ಬೆಂಬಲವಿದೆ. ಹಾಗಾಗಿ, ಹೂಡಿಕೆ ಮೇಲೆ ನಿಗದಿತ ಬಡ್ಡಿದರದ ಲಾಭವು ಖಚಿತವಾಗಿ ಸಿಗುತ್ತದೆ. ಹೂಡಿಕೆ ಮಾಡಿದ ಮೊತ್ತಕ್ಕೆ ನಿಗದಿತ ಅವಧಿ ಬಳಿಕ ಸಾಲ ಸೌಲಭ್ಯವೂ ಇದೆ. ಹಾಗಾಗಿ, ರಿಸ್ಕ್ ಬೇಡ ಎನ್ನುವವರಿಗೆ ಆರ್ ಡಿ ಉಳಿತಾಯ ಯೋಜನೆಯು ಉತ್ತಮ ಎನಿಸಿದೆ.