ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನದ ರಕ್ಷಣೆ ಮಾಡಿದ್ದೇವೆ. ಸಂವಿಧಾನವನ್ನು ಉಳಿಸುವ ಕೆಲಸ ಮಾಡಿದ್ದೇವೆ. ಪವಿತ್ರ ಸಂವಿಧಾನದ ಪುಸ್ತಕದಲ್ಲಿ ಸಾವಿರ ವರ್ಷಗಳ ಇತಿಹಾಸವಿದೆ. ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ನೆಹರೂ ಸೇರಿ ಸಂವಿಧಾನ ಪರ ನಾಯಕರ ಧ್ವನಿ ಇದರಲ್ಲಿ ಅಡಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ, ಫ್ರೀಡಂ ಪಾರ್ಕ್ ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ರಾಗಾ ಮಾತನಾಡಿದರು.
ಸಂವಿಧಾನದ ಪುಸ್ತಕದ ಮುಖಾಂತರವಾಗಿ ದೇಶದ ಪ್ರತಿ ನಾಯಕನಿಗೂ ಒಂದೇ ಒಂದು ಮತದಾನದ ಹಕ್ಕು ನೀಡಿದೆ. ಬಿಜೆಪಿ ನಾಯಕರು ಸಂವಿಧಾನದ ಪುಸ್ತಕದ ಮೇಲೆ ದಾಳಿ ಮಾಡಿದ್ದಾರೆ. ಸಂವಿಧಾನವನ್ನು ನಾಶ ಮಾಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಬೆನ್ನಲ್ಲೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಿತ್ತು. ಇಂದು ಅದರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಪ್ರಶ್ನಿಸಬೇಕಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಒಂದು ಕೋಟಿ ಮತದಾರರು ಚುನಾವಣೆ ಮಾಡಿದ್ದಾರೆ ಎಂದು ರಾಗಾ ಆರೋಪಿಸಿದ್ದಾರೆ.
ಅಕ್ರಮ ಮತದಾನದಿಂದ ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಗೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಎಷ್ಟು ಮತಗಳು ಬಂದಿದ್ದೇವೋ ಅಷ್ಟು ಮತಗಳು ಕೂಡ ಮಹಾರಾಷ್ಟ್ರ ಚುನಾವಣೆಯಲ್ಲಿ ನಮಗೆ ಲಭಿಸಿವೆ. ಬಿಜೆಪಿಗೆ ಅಧಿಕ ಮತಗಳು ಹೋದವು. ನಮಗೆ ಆಶ್ಚರ್ಯವಾಯಿತು. ಪ್ರಶ್ನಿಸಿದೆವು. ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ 15-16 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇದ್ದಿತ್ತು. ಆದರೇ ನಾವು ಕೇವಲ 9 ಕ್ಷೇತ್ರಗಳಲ್ಲಿ ಗೆದ್ದೆವು. ನಮಗೆ ಅನುಮಾನ ಬಂತು. ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ, ಮತಗಟ್ಟೆಗಳ ವೀಡಿಯೋಗ್ರಾಫಿ ನೀಡುವಂತೆ ಮನವಿ ಮಾಡಿದ್ದೇವು. ನಮ್ಮ ಮನವಿಗೆ ಆಯೋಗ ಸ್ಪಂದಿಸಿಲ್ಲ. ಆದರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮಹದೇವಪುರ ಕ್ಷೇತ್ರದ ಮತ ಚಲಾವಣೆಯ ಬಗ್ಗೆ ಪರಿಶೀಲಿಸಿದ್ದೇವೆ. ನಿನ್ನೆ ನಾನು ದಾಖಲೆ ಸಮೇತ ಮತ ಕಳ್ಳತನವಾಗಿರುವುದನ್ನು ಹೇಳಿದ್ದೇನೆ. ಮಹದೇವಪುರ ಮತ ಕ್ಷೇತ್ರದಲ್ಲಿ ಆರುವರೆ ಲಕ್ಷ ಮತಗಳಿವೆ. ಇದರಲ್ಲಿ ಒಂದು ಲಕ್ಷದ ಇನ್ನೂರೈವತ್ತು ಮತಗಳು ಕಳ್ಳತನ ಮಾಡಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ಮತ ಕಳ್ಳತನವಾಗಿದೆ. ಆರು ಮತಗಳಲ್ಲಿ ಒಂದು ಮತಗಳನ್ನು ಐದು ವಿಧಗಳಲ್ಲಿ ಮತ ಕಳ್ಳತನ ಮಾಡಿದ್ದಾರೆ. ನಕಲಿ ಮತದಾರರು, ಸುಳ್ಳು ಮತ್ತು ತಪ್ಪಾದ ವಿಳಾಸಗಳು, ಒಂದೇ ವಿಳಾಸದಲ್ಲಿ ಅಸಂಖ್ಯಾತ ಮತದಾರರು, ತಪ್ಪಾದ ಫೋಟೋಗಳು, ಫಾರಂ ನಂಬರ್ ನಂಬರ್ 6 ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹಲವು ರಾಜ್ಯಗಳಲ್ಲಿ ಒಬ್ಬನೇ ಮತದಾರ ಓಟ್ ಹಾಕಿದ್ದಾನೆ. 40009 ನಕಲಿ ವಿಳಾಸಗಳು ಪತ್ತೆಯಾಗಿವೆ. ಒಂದೇ ವಿಳಾಸದಲ್ಲಿ ಅಸಂಖ್ಯಾತ ಮತದಾರರು ಕಾಣಿಸಿಕೊಂಡಿದ್ದಾರೆ. 10452 ಮತದಾರರು ಒಂದೇ ವಿಳಾಸದಲ್ಲಿರುವುದನ್ನು ನಾವು ಪತ್ತೆ ಮಾಡಿದ್ದೇವೆ. ಚುನಾವಣಾ ಆಯೋಗ ವೆಬ್‌ಸೈಟ್ ಅನ್ನು ಯಾರಿಗೂ ಲಭ್ಯವಾಗದೆ ಇರುವಂತೆ ಮಾಡಿದ್ದಾರೆ. ಈ ರೀತಿಯಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಮತ ಕಳ್ಳತನ ಮಾಡಿದೆ. ಸಮಯ ಬಂದೇ ಬರುತ್ತದೆ. ಆಗ ನಿಮಗೆ ತಕ್ಕ ಪಾಠ ಮಾಡುತ್ತೇವೆ. ಒಬ್ಬೊಬ್ಬರಿಗೂ ಪಾಠ ಕಲಿಸುತ್ತೇವೆ. ನೀವು ಸಂವಿಧಾನದ ಮೇಲೆ ದಾಳಿ ಮಾಡಿದರೇ, ನಾವು ನಿಮ್ಮ ಅಕ್ರಮಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತೇವೆ. ಒಂದು ಕ್ಷೇತ್ರದಲ್ಲಿ ಮತ ಕಳ್ಳತನವಾಗಿದೆ ಎಂದು ನಾವು ಸಾಬೀತು ಮಾಡಿದ್ದೇವೆ. ನಾವು ಸರಿಯಾದ ಮಾಹಿತಿ ನೀಡಿದರೇ ನರೇಂದ್ರ ಮೋದಿ ಕೂಡ ಮತ ಕಳ್ಳತನ ಮಾಡಿ ಪ್ರಧಾನಿ ಆಗಿದ್ದಾರೆ ಎಂದು ಸಾಬೀತು ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ವಿರೋಧ ಪಕ್ಷದ ನಾಯಕನಾಗಿ ನಾನು ಒಂಬಂಟಿಯಾಗಿ ಮಾತನಾಡುತ್ತಿಲ್ಲ. ದೇಶದ ಎಲ್ಲಾ ಪ್ರತಿಪಕ್ಷಗಳು ನಮ್ಮೊಂದಿಗಿದೆ. ಕರ್ನಾಟಕದಲ್ಲಿ ನಾವು ತೆಗೆದಿರುವ ಮಾಹಿತಿ ದೊಡ್ಡ ಕುತಂತ್ರವಾಗಿದೆ. ಆರು ತಿಂಗಳುಗಳು ಬೇಕಾಗಿದೆ ನಮಗೆ ಬೇಕಾಯಿತು. ಏಳು ಅಡಿಯ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ಮತ ಕಳ್ಳತನವಾಗಿರುವುದನ್ನು ನಾವು ಪತ್ತೆ ಹಚ್ಚಿಸಿದ್ದೇವೆ. ಈ ಸಾಕ್ಷಿಯನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೆ ಒಂದು ಕ್ಷೇತ್ರದ ಮಾಹಿತಿ ಪಡೆಯುವುದಕ್ಕೆ ಆರು ತಿಂಗಳು ಬೇಕಾಯಿತು. ನಮ್ಮಲ್ಲಿ ಮಾಹಿತಿ ಇದೆ. ನೀವು ನಮಗೆ ಮಾಹಿತಿ ಕೊಡದೆ ಇದ್ದರೆ ನಾವೇ ಪರಿಶೀಲಿಸುತ್ತೇವೆ. ಒಂದಲ್ಲಾ ಒಂದು ದಿನ ಚುನಾವಣಾ ಆಯೋಗ ಪ್ರತಿಪಕ್ಷಗಳನ್ನು ಎದುರಿಸಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಜನತೆಗೆ ಚುನಾವಣಾ ಆಯೋಗ ಅಪರಾಧ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಅಪರಾಧದ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ. ಈ ಷಡ್ಯಂತ್ರದಲ್ಲಿ ಭಾಗಿಯಾದ ಎಲ್ಲರನ್ನು ಪತ್ತೆ ಹಚ್ಚಿ ತನಿಖೆ ನಡೆಸಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಕಳ್ಳತನ ಮಾಡಿದೆ. ಕಾಸು ಕೊಟ್ಟು ಸರ್ಕಾರವನ್ನು ಕಳ್ಳತನ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿಯೂ ಕಳ್ಳತನವಾಗಿದೆ ಎಂದು ನಮಗೆ ಇದೆ. ಸಂವಿಧಾನ ಎಲ್ಲರನ್ನೂ ರಕ್ಷಿಸುವುದಕ್ಕಾಗಿ ಇದೆ. ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಸಂವಿಧಾನ ರಕ್ಷಣೆಗೆ ನಿಲ್ಲಬೇಕು. ಚುನಾವಣಾ ಆಯೋಗ ಕಳೆದ ಹತ್ತು ವರ್ಷಗಳಲ್ಲಿ ನಡೆದ ಚುನಾವಣೆಯ ದಾಖಲೆಗಳು, ವೀಡಿಯೋಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಚುನಾವಣಾ ಆಯೋಗ ಬಿಜೆಪಿ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ ಎಂದರ್ಥವಾಗುತ್ತದೆ ಎಂದು ಚುನಾವಣಾ ಆಯೋಗಕ್ಕೆ ಸವಾಲೆಸೆದಿದ್ದಾರೆ.