ಬೆಂಗಳೂರು: ದೇಶದ ಯಾವುದೇ ನೋಂದಾಯಿತ ವಿವಿಯಲ್ಲಿ ಪದವಿ ಪಡೆದವರು ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂಬ ಕನಸು ಕಾಣುತ್ತಿದ್ದರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (IDBI Bank Recruitment 2025) 650 ಹುದ್ದೆಗಳು ಖಾಲಿ ಇದ್ದು, ಇಂದಿನಿಂದಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ದೇಶಾದ್ಯಂತ ಒಟ್ಟು 650 ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆ ಖಾಲಿ ಇವೆ.
ಐಡಿಬಿಐ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷದ ಮಿತಿ ಇದೆ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ಇದೆ. ಅರ್ಜಿ ಶುಲ್ಕವಾಗಿ ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳು 250 ರೂ. ಮತ್ತು ಇತರ ಎಲ್ಲ ಅಭ್ಯರ್ಥಿಗಳು 1,050 ರೂ. ಆನ್ ಲೈನ್ ಮೂಲಕ ಪಾವತಿಸಬೇಕು.
ನೇಮಕಾತಿ ಪ್ರಕ್ರಿಯೆ ಹೇಗೆ?
ಆನ್ ಲೈನ್ ಪರೀಕ್ಷೆ, ದಾಖಲಾತಿ ಪರಿಶೀಲನೆ, ಮೆಡಿಕಲ್ ಟೆಸ್ಟ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಅಯ್ಕೆ ನಡೆಯಲಿದೆ. ಆನ್ಲೈನ್ ಪರೀಕ್ಷೆ ಏ. 6ರಂದು ನಡೆಯುವ ಸಾಧ್ಯತೆ ಇದೆ. ಲಾಜಿಕಲ್ ರೀಸನಿಂಗ್, ಡಾಟಾ ಅನಾಲಿಸಿಸ್ & ಇಂಟರ್ ಪ್ರೆಟೇಶನ್, ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್, ಜನರಲ್/ ಎಕಾನಮಿ/ ಬ್ಯಾಂಕಿಂಗ್ ವಿಷಯಗಳ ಪ್ರಶ್ನೆಗಳು ಇರಲಿವೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು https://ibpsonline.ibps.in/idbipgfeb25/ ಭೇಟಿ ನೀಡಿ.
ಪ್ರಮುಖ ದಿನಾಂಕಗಳು
ಆನ್ ಲೈನ್ ಅರ್ಜಿ ಆರಂಭ- ಮಾರ್ಚ್ 1, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನ- ಮಾರ್ಚ್ 12
ಪರೀಕ್ಷಾ ದಿನಾಂಕ- ಏಪ್ರಿಲ್ 6, 2025
ಹುದ್ದೆಗಳ ಮೀಸಲು ಪಟ್ಟಿ ಇಲ್ಲಿದೆ
ಜನರಲ್ 260
ಎಸ್ ಸಿ 100
ಎಸ್ ಟಿ 54
ಇಡಬ್ಲ್ಯೂಎಸ್ 65
ಒಬಿಸಿ 171