ಬೆಂಗಳೂರು: ಇಂಟೆಲಿಜೆಂಟ್ ಕಮ್ಯುನಿಕೇಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನಿಂದ ಡೆಲ್ಲಿ ಸ್ಟೇಟ್ ಕ್ಯಾನ್ಸರ್ ಇನ್ ಸ್ಟಿಟ್ಯೂಟ್ (DSCI) ನಲ್ಲಿ 5 ಡೇಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮೇ 5ರಂದು ನೇರ ಸಂದರ್ಶನ ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ವಾಕ್ ಇನ್ ಇಂಟರ್ ವ್ಯೂಗೆ ಹಾಜರಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 590 ರೂ. ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕವನ್ನು ಐಸಿಎಸ್ಐಎಲ್ ವೆಬ್ಸೈಟ್ ನಲ್ಲಿ ಆನ್ ಲೈನ್ ಮೂಲಕ ಪಾವತಿಸಬೇಕು. ಪಾವತಿ ರಸೀದಿಯ ಪ್ರಿಂಟ್ ಔಟ್ ಅನ್ನು ಸಂದರ್ಶನದ ದಿನ ತರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು icsil.in. ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 24,356 ರೂಪಾಯಿ ಸಂಬಳ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಹತೆಗಳು ಏನೇನು?
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ./ಬಿ.ಎ./ಬಿಕಾಂ ಅಥವಾ ತತ್ಸಮಾನ ಪದವಿ ಹೊಂದಿರಬೇಕು
- ಎಂಎಸ್ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಮತ್ತು ಟ್ಯಾಲಿ ಸೇರಿದಂತೆ ಕಂಪ್ಯೂಟರ್ ಜ್ಞಾನ ಇರಬೇಕು. ಒಂದು ನಿಮಿಷಕ್ಕೆ ಹಿಂದಿ ಅಥವಾ ಇಂಗ್ಲಿಷ್ ನ ಕನಿಷ್ಠ 30 ಪದಗಳನ್ನು ಟೈಪ್ ಮಾಡಬೇಕು.
- ಕನಿಷ್ಠ 3 ತಿಂಗಳ ಅನುಭವ, 100 ಬೆಡ್ ಗಳಿರುವ ಸೂಪರ್ ಸ್ಪೆಷಾಲಿಟಿ ಮೆಡಿಕಲ್ ಸಂಸ್ಥೆಯಲ್ಲಿ, ಸರ್ಕಾರಿ ಆಸ್ಪತ್ರೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಸಂದರ್ಶನದ ಮಾಹಿತಿ
- ದಿನಾಂಕ: 05 ಮೇ 2025 (ಸೋಮವಾರ)
- ಸಮಯ: ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ
- ಸ್ಥಳ: ICSIL, ಅಡ್ಮಿನಿಸ್ಟ್ರೇಟಿವ್ ಬಿಲ್ಡಿಂಗ್, ಮೊದಲ ಮಹಡಿ, ಪೋಸ್ಟ್ ಆಫೀಸ್ ಮೇಲೆ, ಓಖ್ಲಾ ಇಂಡಸ್ಟ್ರಿಯಲ್ ಎಸ್ಟೇಟ್, ಫೇಸ್-3, ನವದೆಹಲಿ – 110020