ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಹಾಸ್ಯ ಪಾತ್ರಗಳು ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಹಿರಿಯ ನಟ ಬ್ಯಾಂಕ್ ಜನಾರ್ದನ್ ನಿಧನಕ್ಕೆ, ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ.
X ಖಾತೆಯಲ್ಲಿ ತಮ್ಮ ಭಾವುಕ ನುಡಿಗಳನ್ನು ಹಂಚಿಕೊಂಡಿರುವ ಜಗ್ಗೇಶ್ ಸಿನಿಮಾಗಳಲ್ಲಿ ನಿಮ್ಮನ್ನು “ಬಾಂಡ್ಲಿ ಫಾದರ್” ಎಂದು ಕರೆಯುತ್ತಿದ್ದೆ. ಅದು ಈಗ ನೆನಪಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.