ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ನಾವು ಸ್ವತಂತ್ರವಾಗಿ ಇರಬೇಕು ಯಾರ ಮೇಲೂ ಡಿಪೆಂಡ್ ಆಗಬಾರದು ಎನ್ನುವ ಕಾರಣಕ್ಕೆ ಜಾಬ್ ಗೆ ಹೋಗುತ್ತಾರೆ. ಹೀಗೆ ಹೋಗುವಾಗ ಕ್ಯಾಬ್ ಬಳಸುವುದು ಕೂಡ ಸಾಮಾನ್ಯವಾಗಿದೆ. ಆದರೆ ಆಟೋ ಕ್ಯಾಬ್ ಎಷ್ಟು ಸೇಫ್ ಎನ್ನುವ ಪ್ರಶ್ನೆ ಈಗ ಮೂಡಿದೆ.
ಬೆಂಗಳೂರಿನಲ್ಲಿ ಯುವತಿಯೊಬ್ಬಳು ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಚಾಲಕನು ಅನುಚಿತವಾಗಿ ವರ್ತಿಸಿದ್ದು, ತನಗಾದ ಕೆಟ್ಟ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಯುವತಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಪೋಸ್ಟ್ನಲ್ಲಿ ಆ ಯುವತಿ ಕ್ಯಾಬ್ ನಲ್ಲಿ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಪ್ರಯಾಣ ಪ್ರಾರಂಭವಾದ ಕೂಡಲೇ ಚಾಲಕ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ್ದ. ಅಷ್ಟೇ ಅಲ್ಲದೇ ಈ ವೇಳೆಯಲ್ಲಿ ಕನ್ನಡ ಅರ್ಥವಾಗುತ್ತದೆಯೇ? ಎಂದು ಕೇಳಿದ್ದು, ನಾನು ಹೌದು ಎನ್ನುತ್ತಿದ್ದಂತೆ, ಅವನು ಯೂಟ್ಯೂಬ್ನಲ್ಲಿ ಜೋರಾಗಿ ಸಂಗೀತ ಹಾಕಿ ಜೋರಾಗಿ ಹಾಡುತ್ತಾ, ತನ್ನ ತೊಡೆಗಳನ್ನು ತಟ್ಟಲು ಪ್ರಾರಂಭಿಸದ. ಈ ವೇಳೆಯಲ್ಲಿ ಪರಿಸ್ಥಿತಿ ಭಯಾನಕವಾಯಿತು. ಆ ತಕ್ಷಣವೇ ನಾನು ಹಾಡಿನ ಧ್ವನಿ ಕಡಿಮೆ ಮಾಡಲು ಪದೇ ಪದೇ ಹೇಳಿದರೂ ಚಾಲಕನು ಕೆಟ್ಟ ನೋಟದಿಂದ ಪ್ರತಿಕ್ರಿಯಿಸಿದ್ದಾನೆ. ಆತನ ಈ ಕೆಟ್ಟ ನಡವಳಿಕೆಯನ್ನು ವಿರೋಧಿಸಿದರೂ ಆತನ ವರ್ತನೆಯೂ ಮಿತಿ ಮೀರಿ, ಕಾರಿನಲ್ಲಿ ಸಿಗರೇಟ್ ಸೇದಿದ್ದಾನೆ ಎಂದು ಬೇಸರ ಹೊರಹಾಕಿದ್ದಾರೆ.