ಬೆಂಗಳೂರು: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೂಡಿಕೆ ಯೋಜನೆಯು ಜನಪ್ರಿಯವಾಗುತ್ತಿದೆ. ಅದರಲ್ಲೂ, ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ರಿಸ್ಕ್ ಬೇಡ ಎನ್ನುವವರು ಪೋಸ್ಟ್ ಆಫೀಸ್ ಸೇರಿ ಯಾವುದೇ ಬ್ಯಾಂಕಿನಲ್ಲಿ ಪಿಪಿಎಫ್ ಮೂಲಕ ಹೂಡಿಕೆ ಮಾಡುತ್ತಿದ್ದಾರೆ. ಪಿಪಿಎಫ್ ಹೂಡಿಕೆಗೆ ಪೋಸ್ಟ್ ಆಫೀಸ್ ನಲ್ಲಿ ಈಗ ಶೇ.7.1ರಷ್ಟು ಬಡ್ಡಿ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಕನಿಷ್ಠ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ.
ಪಿಪಿಎಫ್ ಯೋಜನೆಯು 15 ವರ್ಷಗಳ ಅವಧಿಗೆ ಲಾಕ್ ಇನ್ ಪೀರಿಯಡ್ ಹೊಂದಿದೆ. ಇದರ ಅನ್ವಯ ಪ್ರತಿ ವರ್ಷ ಒಂದೂವರೆ ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಅದು 15 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಆಗ ನೀವು 18.18 ಲಕ್ಷ ರೂಪಾಯಿ ಬಡ್ಡಿ ಗಳಿಕೆ ಮಾಡಬಹುದಾಗಿದೆ. ಹಾಗೆಯೇ, ಇದನ್ನು ಐದು ವರ್ಷಗಳವರೆಗೆ ಮತ್ತೆ ವಿಸ್ತರಣೆಯನ್ನೂ ಮಾಡಬಹುದಾಗಿದೆ. ಆಗ ಹೆಚ್ಚಿನ ಲಾಭ ಸಿಗುತ್ತದೆ.
15 ವರ್ಷ ಹೂಡಿಕೆ, ಕೈತುಂಬ ಗಳಿಕೆ
ಪ್ರತಿ ವರ್ಷ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ಹೂಡಿಕೆ ಮೊತ್ತ 22.50 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ. ಅಂದಾಜು ಬಡ್ಡಿ 18,18,209 ರೂ. ಮತ್ತು ಅಂದಾಜು ಮುಕ್ತಾಯ ಅವಧಿಗೆ 40,68,209 ರೂಪಾಯಿ ಆಗಲಿದೆ. ಹಾಗೆಯೇ, ಹೂಡಿಕೆದಾರರು 5 ವರ್ಷಗಳ ಕಾಲ ಯೋಜನೆಯನ್ನು ವಿಸ್ತರಿಸಬಹುದು ಅದೇ ಸಮಯದಲ್ಲಿ ವರ್ಷಕ್ಕೆ 1.50 ಲಕ್ಷ ರೂ. ಹೂಡಿಕೆ ಮುಂದುವರಿಸಬಹುದು.
20 ವರ್ಷಗಳ ಬಳಿಕ?
20 ವರ್ಷಗಳಲ್ಲಿ, ಒಟ್ಟು ಹೂಡಿಕೆ 30,00,000 ರೂ.ಗಳಾಗಿರುತ್ತದೆ, ಅಂದಾಜು ಬಡ್ಡಿ 36,58,288 ರೂ.ಗಳಾಗಿರುತ್ತದೆ ಮತ್ತು ಅಂದಾಜು ಕಾರ್ಪಸ್ 66,58,288 ರೂ.ಗಳಾಗಿರುತ್ತದೆ. ಬೇಕಾದರೆ ಹೂಡಿಕೆದಾರರು ಇನ್ನೂ ಐದು ವರ್ಷಗಳ ವಿಸ್ತರಣೆ ತೆಗೆದುಕೊಂಡು ಹೂಡಿಕೆ ಮುಂದುವರಿಸಬಹುದು. ಆ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು.