ಇತ್ತೀಚಿನ ದಿನಗಳಲ್ಲಿ ಏನೇ ಹುಷಾರ್ ತಪ್ಪಿದ್ದರು ಕೂಡ ಇಂಗ್ಲೀಷ್ ಮೆಡಿಸನ್ಸ್ ಗೆ ಮಾರು ಹೋಗಿದ್ದಾರೆ. ತಲೆನೋವು ಬಂದ್ರು ಮಾತ್ರೆ.. ಜ್ವರ ಬಂದ್ರು ಮಾತ್ರೆ.. ಆದರೆ, ಅತಿಯಾಗಿ ಮಾತ್ರೆ ಸೇವಿಸುವುದರಿಂದ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಗೊತ್ತಾ? ಪ್ಯಾರಾಸಿಟಮಲ್ ಮಾತ್ರೆ ಎಷ್ಟು ಸೇಫ್ ಅಂತ ತಿಳಿದುಕೊಳ್ಳಬೇಕಾದರೆ ಪೂರ್ತಿ ಸ್ಟೋರಿ ಓದಿ..
ತಜ್ಞರ ಹೇಳುವ ಪ್ರಕಾರ, ಮಾತ್ರೆಯನ್ನು ಸರಿಯಾಗಿ ಬಳಸಿದಾಗ ಪ್ಯಾರಾಸಿಟಮಾಲ್ ನ್ನು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ ಪ್ಯಾರೆಸಿಟಮಾಲ್ ನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಇದು ಸಾಮಾನ್ಯವಾಗಿ 500 ಮಿ.ಗ್ರಾಂ ಮತ್ತು 650 ಮಿ.ಗ್ರಾಂ ಮಾತ್ರೆಗಳು ಮತ್ತು 1000 ಮಿ.ಗ್ರಾಂ ಚುಚ್ಚುಮದ್ದಿನ ರೂಪಗಳಲ್ಲಿ ಲಭ್ಯವಿದೆ.
ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ, ವಯಸ್ಕರಿಗೆ ಗರಿಷ್ಠ ಅನುಮತಿಸುವ ಡೋಸ್ ದಿನಕ್ಕೆ 4 ಗ್ರಾಂ (ಅಥವಾ 4000 ಮಿ.ಗ್ರಾಂ). ಇದರರ್ಥ ನಿಮಗೆ 500 ಮಿ.ಗ್ರಾಂ ಮಾತ್ರೆಗಳನ್ನು ಶಿಫಾರಸು ಮಾಡಿದ್ದರೆ, ನೀವು 24 ಗಂಟೆಗಳ ಅವಧಿಯಲ್ಲಿ 8 ಮಾತ್ರೆಗಳನ್ನು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ಡೋಸ್ಗಳ ನಡುವೆ ಕನಿಷ್ಠ 4 ಗಂಟೆಗಳ ಅಂತರವಿರಬೇಕು. 10 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ದಿನಕ್ಕೆ 4 ಬಾರಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಮಾತ್ರ ನೀಡಬಹುದು.. ಆದರೂ ಮಾತ್ರೆ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಮಾತ್ರ ಪಡೆಯಲೇಬೇಕು.