ಪಹಲ್ಗಾಮ್ ಹತ್ಯಾಕಾಂಡದ ಬೆನ್ನಲ್ಲೇ ಭಾರತದಿಂದ ವಾಪಸ್ ಆಗಲು ಪಾಕಿಸ್ತಾನಿಗಳಿಗೆ ಗಡುವು ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲೇ ಕಳೆದ ಮೂರು ದಿನಗಳಿಂದ 537 ಪಾಕಿಗಳು ಭಾರತವನ್ನು ತೊರೆದಿದ್ದಾರೆ.
ಈ ಪೈಕಿ, ಕರ್ನಾಟಕದಲ್ಲಿ ನೆಲೆಸಿದ್ದ ನಾಲ್ವರು ತಮ್ಮ ತವರಿಗೆ ಮರಳಿದ್ದಾರೆ. ಉಳಿದಂತೆ ಕೇರಳದಲ್ಲಿ ಒಟ್ಟು 104 ಮಂದಿ ಪಾಕ್ ಪ್ರಜೆಗಳಿದ್ದು, 99 ಮಂದಿ ದೀರ್ಘಕಾಲೀನ ವೀಸಾ ಹೊಂದಿದ್ದಾರೆ. ಉಳಿದಂತೆ ಐವರು ಸ್ವದೇಶಕ್ಕೆ ವಾಪಸ್ ಆಗಿದ್ದಾರೆ. ಗುಜರಾತ್ ನಿಂದ 7, ಗೋವಾದಿಂದ 3, ಒಡಿಶಾದಿಂದ 12 ಹಾಗೂ ಮಧ್ಯಪ್ರದೇಶದಿಂದ 228 ಪಾಕಿಗಳು ವಾಪಸ್ ಆಗಿದ್ದಾರೆ. ಬಿಹಾರದಿಂದ 129 ಮಂದಿ ಕೂಡಾ ತಾಯ್ನಾಡಿಗೆ ಮರಳಿದ್ದಾರೆ. ಈ ನಡುವೆ, ಪಾಕಿಸ್ಥಾನದಲ್ಲಿದ್ದ 850 ಭಾರತೀಯರು ತಮ್ಮ ತವರಿಗೆ ಮರಳಿದ್ದಾರೆ.