ಬೆಂಗಳೂರು: ರಾಜ್ಯದಲ್ಲಿ ಕೋವಿಡ್ (Covid 19) ಸೋಂಕಿನಿಂದಾಗಿ ಸಾವು (Death) ಸಂಭವಿಸಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಹತೋಟಿಯಲ್ಲಿದೆ. ಹೀಗಾಗಿ ಯಾರೂ ಆತಂಕ ಪಡಬಾರದು. ಸೋಂಕು ಪಾಸಿಟಿವ್ ಬಂದ 1 ಜನರಲ್ಲಿ 10 ಜನರ ಡೆತ್ ಆಡಿಟ್ ರಿಪೋರ್ಟ್ ಬಂದಿದ್ದು, ಎಲ್ಲರೂ ಮಾರಕ ಕಾಯಿಲೆಗಳಾಗಿರುವ ಹೃದಯ ಸಂಬಂಧಿ, ಕಿಡ್ನಿ, ಅಂಗಾಂಗ ವೈಫಲ್ಯದಂತಹ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕೋವಿಡ್ ಕಾರಣವಲ್ಲ ಎಂದಿದ್ದಾರೆ.