ಬೆಂಗಳೂರು: ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ವಸ್ತು ಎಂದರೆ ಅದು ಚಿನ್ನ. ಈ ಚಿನ್ನಕ್ಕೆ ಈಗ ಭಾರೀ ಬೇಡಿಕೆ ಬರುತ್ತಿದೆ. ಹೂಡಿಕೆ ದೃಷ್ಟಿಯಿಂದಲೂ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಸಿಗುತ್ತಿರುವುದರಿಂದಾಗಿ ಅದಕ್ಕೆ ಬೇಡಿಕೆ ಏರುತ್ತಲೇ ಇದೆ. ಸದ್ಯ ಮಾರುಕಟ್ಟೆಯಲ್ಲಿ ಲಕ್ಷ ರೂ. ಆಸುಪಾಸಿನಲ್ಲಿ ಚಿನ್ನ ಮಾರಾಟವಾಗುತ್ತಿದೆ.
ಆದರೆ, ಕೆಲವು ದಿನಗಳಿಂದ ಚಿನ್ನದ ಬೇಡಿಕೆ ಇಳಿಕೆಯತ್ತ ಮುಖ ಮಾಡಿದೆ. ಕಳೆದ ಹತ್ತು ದಿನಗಳ ಹಿಂದೆ 9,265 ರೂ ಇದ್ದ ಆಭರಣ ಚಿನ್ನದ ಬೆಲೆ (gold rate today) ಈಗ 8,930 ರೂ.ಗೆ ಇಳಿಕೆ ಕಂಡಿದೆ. ಹತ್ತು ದಿನಗಳಲ್ಲಿ ಗ್ರಾಂಗೆ 335 ರೂ.ನಷ್ಟು ಇಳಿದಿದೆ.
ಅಪರಂಜಿ ಚಿನ್ನದ ಬೆಲೆ 9,742 ರೂ.ಗೆ ಇಳಿದಿದೆ. ಭಾರತೀಯ ಮಾರುಕಟ್ಟೆ ಅಷ್ಟೇ ಅಲ್ಲದೇ, ವಿದೇಶ ಮಾರುಕಟ್ಟೆಯಲ್ಲಿ ಕೂಡ ಇಳಿಕೆ ಕಂಡಿದೆ. ರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 89,300 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 97,420 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 10,780 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 29ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,300 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,420 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,070 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,078 ರೂ
ಸೂಚನೆ: ನಾವು ನೀಡಿರುವ ದರವೇ ಅಂತಿಮ ಎನ್ನಲಾಗುವುದಿಲ್ಲ. ಕೆಲವು ಪ್ರಮುಖ ಚಿನ್ನಾಭರಣ ಅಂಗಡಿಗಳಿಂದ ಈ ಮಾಹಿತಿ ಪಡೆಯಲಾಗಿದೆ. ನಾವು ನೀಡಿರುವ ದರವೇ ಅಂತಿಮ ಎನ್ನಲಾಗುವುದಿಲ್ಲ. ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹಲವು ಶುಲ್ಕಗಳು ಕೂಡ ಇರುತ್ತವೆ.