ಕೊಪ್ಪಳ: ಸಾಲಾಬಾಧೆ ಹಿನ್ನೆಲೆ ಗೃಹಣಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳದ ಪದ್ಮಾವತಿ ರೇವಡಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇಬ್ಬರು ಹೆಣ್ಣು ಮಕ್ಕಳಿರುವ ಪದ್ಮಾವತಿ ಬದುಕಿಗಾಗಿ ಸಾಲ ಮಾಡಿಕೊಂಡಿದ್ದರು. ಸಾಲವನ್ನು ತೀರಿಸಲಾಗದೆ ಮನನೊಂದ ಮಹಿಳೆ ತುಂಗಭದ್ರಾ ನದಿಗೆ ಹಾರಲು ಯತ್ನಿಸಿದ್ದಾರೆ.
ಈ ವೇಳೆ ದೇವಸ್ಥಾನದ ಭದ್ರತಾ ಸಿಬ್ಬದಿ ಬಂದು ಆಕೆಯನ್ನು ತಡೆದಿದ್ದಾರೆ. ಸದ್ಯ ಭದ್ರತಾ ಸಿಬ್ಬಂದಿ ಮಹಿಳೆಗೆ ಸಾಂತ್ವನ ಹೇಳಿ ಮರಳಿ ಆಕೆಯ ಗ್ರಾಮಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.



















