ಕಾರವಾರ: ಹಿಂದೂ ಕಾರ್ಯಕರ್ತನ ಮೇಲೆ ಎಸ್ಪಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಕಾರ್ಯಕರ್ತರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿರುವ ಘಟನೆ ಭಟ್ಕಳ(Bhatkal) ದಲ್ಲಿ ನಡೆದಿದೆ.
ವಿಚಾರಣೆ ನೆಪದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತನ ಮೇಲೆ ಎಸ್ಪಿ ಎಂ.ನಾರಾಯಣ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಭಟ್ಕಳದಲ್ಲಿ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಹೆದ್ದಾರಿ ತಡೆದು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಶ್ರೀನಿವಾಸ್ ನಾಯ್ಕ ಹಲ್ಲೆಗೊಳಗಾಗಿದ್ದು, ಭಟ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿರಸಿಯಲ್ಲಿ ಮಂಗಳವಾರ ರೌಡಿಶೀಟರ್ ಪೆರೇಡ್ ನಡೆಸಿದ್ದ ಎಸ್ಪಿ ಎಂ.ನಾರಾಯಣ್, ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. 6 ಪ್ರಕರಣದಲ್ಲಿ ಆರೋಪಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಡಿಪಾರಾಗಿದ್ದ ಆಟೋ ಚಾಲಕ ಶ್ರೀನಿವಾಸ ನಾಯ್ಕ್ ನನ್ನು ಭಟ್ಕಳ ಪೊಲೀಸರು ಶಿರಸಿಗೆ ಕರೆದೊಯ್ದಿದ್ದರು. ಶಿರಸಿ ನಗರ ಠಾಣೆಯಲ್ಲಿ ಇದ್ದ ಎಸ್ಪಿ ಎಂ.ನಾರಾಯಣ್ ತನಿಖೆ ನೆಪದಲ್ಲಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ತಿಭಟನೆಯಲ್ಲಿ ಮಾಜಿ ಬಿಜೆಪಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.