ಬಾಗಲಕೋಟೆ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಾಗಲಕೋಟೆ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಹೊರವಲಯದಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ಹಳ್ಳ ರಭಸವಾಗಿ ಹರಿಯುತ್ತಿದ್ದರು ಕೂಡ ಆಚೆಗೆ ಇರುವ ಇಳಕಲ್ ಮಹಾಂತಪ್ಪ ಅಜ್ಜನ ದೇವಸ್ಥಾನಕ್ಕೆ ದಾಟಿಕೊಂಡು ಹೋಗಿ ಭಕ್ತರು ದೇವರ ದರ್ಶನ ಮಾಡಿದ್ದಾರೆ.
ಸೇತುವೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರಿದ್ದರು ಕೂಡ ಪುಟ್ಟ ಮಕ್ಕಳ ಸಮೇತ, ಅಪಾಯ ಲೆಕ್ಕಿಸದೆ ಜಲಾವೃತವಾದ ಸೇತುವೆ ಮೇಲೆ ಕಾರು, ಬೈಕ್ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.