ಬೆಂಗಳೂರು: ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಮಗಳಿಗೆ ನಾಮಕರಣ ಮಾಡಿದ್ದಾರೆ.
ಮುದ್ದು ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ಮಗಳ ಫೋಟೋ ಹಂಚಿಕೊಳ್ಳುವ ಮೂಲಕ ಹೆಸರನ್ನು ರಿವಿಲ್ ಮಾಡಿದ್ದಾರೆ. ಕೊಡವ ಸಂಪ್ರದಾಯದಂತೆ ಇಂದು ವಿರಾಜಪೇಟೆಯಲ್ಲಿ ಮಗಳ ನಾಮಕರಣ ಕಾರ್ಯಕ್ರಮವನ್ನು ಕೂಡ ದಂಪತಿ ಹಮ್ಮಿಕೊಂಡಿದ್ದಾರೆ.
ಹರ್ಷಿಕಾ -ಭುವನ್ ಮಗಳ ನಾಮಕರಣದಲ್ಲಿ ಸಿನಿಮಾ ಕಲಾವಿದರು ಹಾಗೂ ಸ್ನೇಹಿತರು ಭಾಗಿಯಾಗಲಿದ್ದಾರೆ.