ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಕ್ರಿಕೆಟ್ ಟೂರ್ನಿಯ ವೇಳೆಯೇ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಘೋಷಣೆ ಮಾಡಿದೆ. ಹೌದು, ಜಿಯೋ ಫೈಬರ್ ಮೂಲಕ ಜಿಯೋ ಬಳಕೆದಾರರು 50 ದಿನಗಳವರೆಗೆ ಉಚಿತ ವೈಫೈ ಪಡೆಯಬಹುದಾಗಿದೆ. ಹಾಗೆಯೇ, ಜಿಯೋ ಹಾಟ್ ಸ್ಟಾರ್ ಅನ್ನು ಕೂಡ ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.
ಜಿಯೋ ಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್ಸ್ಟಾರ್ ವಿಲೀನದ ನಂತರ ಜಿಯೋ ಬಳಕೆದಾರರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಹಾಟ್ ಸ್ಟಾರ್ ಈಗ ಉಚಿತ ವೀಕ್ಷಣೆಗೆ ಲಭ್ಯವಿದೆ. ಜಿಯೋ ಈಗ ಹೊಸ ಅನಿಯಮಿತ ಕೊಡುಗೆಯನ್ನು ಘೋಷಿಸಿದೆ. ಹಾಟ್ ಸ್ಟಾರ್ 50 ದಿನಗಳವರೆಗೆ ಉಚಿತ ವೀಕ್ಷಣೆಯನ್ನು ನೀಡುತ್ತಿದೆ.
ಜಿಯೋ ನೀಡುವ ಈ ಅನಿಯಮಿತ ಕೊಡುಗೆ ಕೇವಲ 299 ರೂ.ಗಳಿಗೆ ಲಭ್ಯವಿದೆ. ಈ ಕೊಡುಗೆಯ ಭಾಗವಾಗಿ ಅನಿಯಮಿತ 5ಜಿ ಸೇವೆಗಳು ಲಭ್ಯ ಇವೆ. ನೀವು ಜಿಯೋ ಹಾಟ್ ಸ್ಟಾರ್ ಅನ್ನು 90 ದಿನಗಳವರೆಗೆ, ಅಂದರೆ ಮೂರು ತಿಂಗಳವರೆಗೆ ಉಚಿತವಾಗಿ ವೀಕ್ಷಿಸಬಹುದು. ಇದನ್ನು ಮೊಬೈಲ್ ಮತ್ತು ಟಿವಿ ಎರಡರಲ್ಲೂ ವೀಕ್ಷಿಸಬಹುದು. ಮತ್ತೊಂದೆಡೆ, ಜಿಯೋ ಫೈಬರ್ ಮತ್ತು ಜಿಯೋ ಏರ್ ಫೈಬರ್ನ 50 ದಿನಗಳ ಉಚಿತ ವೈಫೈ ಲಭ್ಯವಿದೆ. ಜಿಯೋ ಫೈಬರ್ ಅನ್ವಯ ಮನೆಗೆ ಉಚಿತವಾಗಿ ರೂಟರ್ ಕೂಡ ಅಳವಡಿಸಲಾಗುತ್ತದೆ.
ಈ ಕೊಡುಗೆಯ ಪ್ರಯೋಜನಗಳು ಇಲ್ಲಿಗೆ ಮುಗಿಯುವುದಿಲ್ಲ. ನೀವು ಜಿಯೋ ಹಾಟ್ಸ್ಟಾರ್ ಅನ್ನು 4K ಗುಣಮಟ್ಟದಲ್ಲಿ ವೀಕ್ಷಿಸಬಹುದು. 800 ಕ್ಕೂ ಹೆಚ್ಚು ಟಿವಿ ಚಾನೆಲ್ಗಳು, 11ಕ್ಕೂ ಹೆಚ್ಚು ಒಟಿಟಿ ಅಪ್ಲಿಕೇಶನ್ ಗಳು ಮತ್ತು 50 ದಿನಗಳ ಅನಿಯಮಿತ ವೈಫೈ ಸೇವೆಗಳನ್ನು ಪಡೆಯಬಹುದು. ಹಾಗೆಯೇ, ಕೇವಲ 100 ರೂಪಾಯಿಗೆ ಜಿಯೋ ಹಾಟ್ ಸ್ಟಾರ್ ಅನ್ನು 3 ತಿಂಗಳ ಕಾಲ ಉಚಿತವಾಗಿ ವೀಕ್ಷಿಸಬಹುದು.