ಮೈಸೂರು: ಉದ್ಯೋಗಿಯೊಬ್ಬ ಸರ್ಕಾರಿ ಕಚೇರಿಯ ಕೊಠಡಿಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೈಸೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಈ ಘಟನೆ ನಡೆದಿದೆ. ಹೊರ ಗುತ್ತಿಗೆ ನೌಕರ ದೀಪಕ್ ಆತ್ಮಹತ್ಯೆಗೆ ಶರಣಾದ ಉದ್ಯೋಗಿ. 6 ತಿಂಗಳಿಂದ ಸಂಬಳ ನೀಡದ್ದಕ್ಕೆ ಬೇಸರಗೊಂಡಿದ್ದ ಉದ್ಯೋಗಿ ದೀಪಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದೇ ವಿಷಯವಾಗಿ ಕಳೆದ ನಾಲ್ಕು ತಿಂಗಳ ಹಿಂದೆ ದೀಪಕ್ ಕೈ ಕೊಯ್ದುಕೊಂಡಿದ್ದ. ಘಟನೆ ನಂತರ ಈ ದಿನವೇ ಸಂಬಳ ಹಾಕಲಾಗುತ್ತೆ ಎಂದು ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಹೇಳಿದ್ದಾರೆ. ಆದರೆ, ಸಂಬಳ ಕೊಡದ ಹಿನ್ನೆಲೆಯಲ್ಲಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.