ಕೋಲಾರ : ಸರ್ಕಾರಿ ಆಸ್ಪತ್ರೆಗೆ ಸೇರಿದ್ದ ರಾಶಿ ರಾಶಿ ಔಷಧಿಗಳು ತಿಪ್ಪೆ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಯ ಹೊರಭಾಗದ ತಿಪ್ಪೆಗುಂಡಿಯಲ್ಲಿ ಇನ್ನೂ ಬಳಸದ, ಅವಧಿ ಮೀರದ ಚುಚ್ಚು ಮದ್ದುಗಳು, ಮಾತ್ರೆಗಳು ಮೂಟೆಗಟ್ಟಲೆ ಪತ್ತೆಯಾಗಿದ್ದು, ಅವಶ್ಯಕತೆ ಇಲ್ಲದ ಮಾತ್ರೆಗಳ ಇಂಡೆಂಟ್ ಮಾಡಿ ಬಳಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಔಷಧಿ ವಿತರಿಸದೆ, ಖಾಸಗಿ ಮೆಡಿಕಲ್ ಶಾಪ್ ಗಳಿಗೆ ರೋಗಿಗಳನ್ನು ಕಳುಹಿಸುತ್ತಿದ್ದ, ವೈದ್ಯರ ಮೇಲೆ ಹಾಗೂ ಅವಧಿ ಮೀರಿದ್ದರು ಆಸ್ಪತ್ರೆಯ ತ್ಯಾಜ್ಯ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಗೌನಿಪಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಅವಧಿ ಮೀರದ ಹಾಗೂ ಅವಧಿ ಮೀರಿದ ಔಷಧಿಗಳ ಕುರಿತು ತನಿಖೆ ನಡೆಸಲು ಒತ್ತಾಯಿಸಿದ್ದಾರೆ.