ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಕೆಜಿಎಫ್ ಭಾಗ 2 ರಿಲೀಸ್ ಆಗಿ 3 ವರ್ಷ ತುಂಬಿದ ಸಂದರ್ಭದಲ್ಲೇ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಮುಂದುವರಿದ ಭಾಗ ಬರುವುದು ನಿಶ್ಚಿತ ಎನ್ನುವುದು ಈ ಮೂಲಕ ಸ್ಪಷ್ಟವಾಗಿದೆ. ಭಾಗ 2ಕ್ಕೆ ಮೂರು ವರ್ಷ ತುಂಬಿದ ಸಂದರ್ಭದಲ್ಲಿ ಹೊಸ ಟೀಸರ್ ರಿಲೀಸ್ ಮಾಡಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ, ಚಾಪ್ಟರ್-3ರ ಮುನ್ಸೂಚನೆ ನೀಡಿದೆ. ಅಷ್ಟೇ ಅಲ್ಲಾ ರಾಕಿಗಾಗಿ ಸಿಐಎ ಹುಡುಕಾಟ ಶುರು ಮಾಡಿರುವ ಸುಳಿವನ್ನು ನೀಡಲಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಮುಂದಿನ ಭಾಗದಲ್ಲಿ ಪ್ಯಾನ್ ವರ್ಲ್ಡ್ ಆಗುತ್ತಿದೆ ಅನ್ನೋದನ್ನು ಬಹಿರಂಗ ಪಡಿಸಿದೆ.
ರಾಕಿ ಬಾಯ್ ನ ಮತ್ತೊಂದು ಅಧ್ಯಾಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಯಾವಾಗ ಮುಹೂರ್ತ ಅನ್ನುವುದು ಕೆಲವು ದಿನಗಳಲ್ಲೇ ಬಹಿರಂಗವಾಗಿದೆ.